top of page

ಪಿತೃವಿಜ್ಞಾನ ಪರಿಚಯ - ಪ್ರಾಥಮಿಕ ಪಾಠ

  • 4 Steps
Everyone who has completed all steps in the program will get a badge.

About

Course Fees - Rs. 500/- ಮಹಾಲಯ ಪಕ್ಷದ ಸುಸಂದರ್ಭದಲ್ಲಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿರುವ ಪಿತೃಗಳ ಬಗ್ಗೆ ಪುರಾತನ ಕಾಲದ ವೇದ ವಿಜ್ಞಾನದಲ್ಲಿ ಚಿಂತಿಸಲ್ಪಟ್ಟಿರುವ ಕೆಲ ಪ್ರಧಾನ ವಿಚಾರಗಳನ್ನು ಸರಳವಾಗಿ ಮನದಟ್ಟು ಮಾಡಿಸುವ ಪಾಠ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಮೊದಲೆರಡು ಪಾಠಗಳಲ್ಲಿ ಪಿತೃವಿಜ್ಞಾನ ಪರಿಚಯದ ಮೂಲ ಭೂಮಿಕೆಯನ್ನು 2 ವೀಡಿಯೋಗಳಲ್ಲಿ ಅನಾವರಣಗೊಳಿಸಲಾಗಿದೆ. ಶ್ರದ್ಧಾಳುಗಳು ಈ ಜ್ಞಾನಸತ್ರದಲ್ಲಿ ಪಾಲ್ಗೊಂಡು ಪಿತೃವಿಜ್ಞಾನದ ನೆಲೆಗಟ್ಟನ್ನು ಅರ್ಥಮಾಡಿಕೊಂಡು ಪಿತೃಭಕ್ತಿ ವೃದ್ಧಿಯ ಮುಖೇನ ಪಿತೃಕೃಪೆಗೆ ಪಾತ್ರರಾಗೋಣ ಎಂಬ ಸದಾಶಯವಿದೆ. ವೇದವಿಧ್ಯಾ ಕನ್ಸಲ್ಟೆಂಟ್ಸಿನ ಸ್ಥಾಪಕರಾದ ವೇದ ವಿಜ್ಞಾನಿ ಹೇಮಂತ್ ಕುಮಾರ್ ಜಿ ಇವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಪಾಠದ ಭಾಷೆಯು ಕನ್ನಡವಾಗಿರುತ್ತದೆ. ಅಲ್ಲಲ್ಲಿ ಬ್ರಾಹ್ಮೀ ಭಾಷೆಯ ಮಂತ್ರಗಳು, ಸಂಸ್ಕೃತದ ಶ್ಲೋಕಗಳ ವಿವರಣೆ ಇರುತ್ತದೆ. ಈ ಪಾಠವು ಹೇಮಂತ್ ರವರ "ಪಿತೃವಿಜ್ಞಾನ ಪರಿಚಯ" ಪುಸ್ತಕದ ಆಧಾರದಲ್ಲಿ ಆಯೋಜಿಸಲ್ಪಟ್ಟಿರುತ್ತದೆ. ಪುಸ್ತಕದ ಸಂಪೂರ್ಣ ವಿಷಯಗಳನ್ನು ಪಾಠದಲ್ಲಿ ಕಲಿಸುವುದು ಕಷ್ಟಸಾಧ್ಯ. ಆಚಾರ್ಯಂ ಪಾದಮಾದತ್ತಂ ಎಂಬಂತೆ ಕಾಲು ಭಾಗ ಮಾತ್ರ ಪಾಠ ಮಾಡಬಹುದು. ಉಳಿದದ್ದನ್ನು ಸ್ವಾಧ್ಯಾಯದಿಂದ ಪರಿಪಕ್ವ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ - https://youtu.be/ypHSJD3qQFQ ಹೆಚ್ಚಿನ ಅಧ್ಯಯನಕ್ಕಾಗಿ ಆಸಕ್ತರು ಪುಸ್ತಕವನ್ನು ಅಮೇಜಾನಿನಿಂದ ಕೊಳ್ಳಬಹುದು. ಪುಸ್ತಕ ಕೊಳ್ಳುವ ಲಿಂಕ್ - https://www.amazon.in/dp/B095KPFXCH ಮುಂದಿನ ದಿನಗಳಲ್ಲಿ ಪಿತೃಗಳ ಬಗ್ಗೆ ಇನ್ನೂ ಆಳವಾದ ವೈಜ್ಞಾನಿಕ ಚಿಂತನೆಯುಳ್ಳ ಪುಸ್ತಕಗಳು ಹಾಗೂ ಪಾಠಗಳು ಬರಲಿವೆ. ಆಸಕ್ತರು ನಮ್ಮ ಅಂತರ್ಜಾಲ ತಾಣವಾದ https://www.vedavidhya.com ಇದಕ್ಕೆ subscribe ಮಾಡಬಹುದು.

You can also join this program via the mobile app. Go to the app

Price

Free

Share

bottom of page