About
Course Fees - Rs. 500/- ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿರುವ ಪಿತೃಗಳ ಬಗ್ಗೆ ಪುರಾತನ ಕಾಲದ ವೇದ ವಿಜ್ಞಾನದಲ್ಲಿ ಚಿಂತಿಸಲ್ಪಟ್ಟಿರುವ ಕೆಲ ಪ್ರಧಾನ ವಿಚಾರಗಳನ್ನು ಸರಳವಾಗಿ ಮನದಟ್ಟು ಮಾಡಿಸುವ ಪಾಠ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ರಾಥಮಿಕ ಪಾಠದಲ್ಲಿ ಪಿತೃವಿಜ್ಞಾನ ಪರಿಚಯದ ಮೂಲ ಭೂಮಿಕೆಯನ್ನು 2 ವೀಡಿಯೋಗಳಲ್ಲಿ ಅನಾವರಣಗೊಳಿಸಲಾಗಿದೆ. ಹೊಸದಾಗಿ ಸೇರುವವರು ಮೊದಲಿಗೆ ಪ್ರಾಥಮಿಕ ಪಾಠವನ್ನು https://www.vedavidhya.com/challenge-page/pvp1 ಈ ಲಿಂಕಿನಿಂದ ನೊಂದಾಯಿಸಿ ನಂತರ ಪಾಠ 3-4ಗೆ ನೊಂದಾಯಿಸಿ. ದಿನಾಂಕ 6 ಮತ್ತು 7 ನವಂಬರ್ 2021, ಮಧ್ಯಾಹ್ನ 3:00 - 4:30 ಗೆ ಯಮ ದ್ವಿತೀಯದ ವಿಶೇಷ ಪರ್ವದಲ್ಲಿ ಈ ಪಾಠವನ್ನು ಆಯೋಜಿಸಲಾಗಿದೆ. ಪಾಠಕ್ಕೂ ಮುನ್ನವೇ ನೊಂದಣಿ ಮಾಡಿಕೊಳ್ಳುವವರಿಗೆ ನೇರವಾಗಿ ಆನ್ಲೈನ್ ಮುಖಾಮುಖಿ ಪಾಠ ಸಿಗುತ್ತದೆ. ಪಾಠದ ನಂತರ ರಿಜಿಸ್ಟರ್ ಮಾಡುವವರಿಗೆ ರೆಕಾರ್ಡ್ ಮಾಡಲಾದ ವೀಡಿಯೋವನ್ನು ನೋಡಿ ಕಲಿತುಕೊಳ್ಳುವ ಅವಕಾಶವಿದೆ. ಪಾಠದ ವಿಷಯ:- 2. ಬ್ರಹ್ಮ-ಸುಬ್ರಹ್ಮ ಯೋಗದಿಂದ ಆತ್ಮ-ಪ್ರಾಣ-ಪಶು ಎಂಬ ತ್ರಿಧಾತು ಪ್ರಜಾಪತಿ 3. ಅಮೃತ-ಸತ್ಯ-ಯಜ್ಞ ಭೇದದಿಂದ ಆತ್ಮದ ತ್ರಿರೂಪತೆ 4. ಮನ ರೂಪಿಣೀ ಪ್ರಾಣಗರ್ಭಿತಾ ವಾಕ್ಕೇ ಅಮೃತವೆಂಬ ಅಕ್ಷರ ಬ್ರಹ್ಮವು 5. ಅಕ್ಷರ ಪುರುಷದಿಂದಲೇ ಋಕ್-ಯಜುಃ-ಸಾಮ ರೂಪೀ ತ್ರಯೀ ವಿಧ್ಯಾ ಕ್ರಮದಿಂದ ಎಲ್ಲಾ ರೀತಿಯ ಸೃಷ್ಟಿ 6. ಅಕ್ಷರದ ಪುರುಷ ಭಾವ ನಿರುಕ್ತಿ 7. ಋಷಿ ಹಾಗೂ ಮಂತ್ರ ನಾಮದ ಪ್ರಾಣ ಮತ್ತು ವಾಕ್ ಗಳಿಗೆ ಯಜುಃ ಶಬ್ದದಿಂದ ವ್ಯವಹಾರ. ಹೆಚ್ಚಿನ ಅಧ್ಯಯನಕ್ಕಾಗಿ ಆಸಕ್ತರು ಪುಸ್ತಕವನ್ನು ಅಮೇಜಾನಿನಿಂದ ಕೊಳ್ಳಬಹುದು. ಪುಸ್ತಕ ಕೊಳ್ಳುವ ಲಿಂಕ್ - https://www.amazon.in/dp/B095KPFXCH ಮುಂದಿನ ದಿನಗಳಲ್ಲಿ ಪಿತೃಗಳ ಬಗ್ಗೆ ಇನ್ನೂ ಆಳವಾದ ವೈಜ್ಞಾನಿಕ ಚಿಂತನೆಯುಳ್ಳ ಪುಸ್ತಕಗಳು ಹಾಗೂ ಪಾಠಗಳು ಬರಲಿವೆ. ಆಸಕ್ತರು ನಮ್ಮ ಅಂತರ್ಜಾಲ ತಾಣವಾದ https://www.vedavidhya.com ಇದಕ್ಕೆ subscribe ಮಾಡಬಹುದು.
You can also join this program via the mobile app. Go to the app