About
ವಾರಾಹಿ ದೇವಿಯ ತಾಂತ್ರಿಕ ಪೂಜೆಯನ್ನು ಅನುಸರಿಸಲು ವಿವಿಧ ಮಾರ್ಗಗಳಿವೆ. ಆಕೆಯನ್ನು ಸಿದ್ಧ ಧರ್ಮ, ಕೌಲ, ಶಾಕ್ತ, ಶೈವ ಮತ್ತು ವೈಷ್ಣವ ತಂತ್ರಗಳಲ್ಲಿ, ವಜ್ರಯಾನ ಬೌದ್ಧ ತಂತ್ರಗಳಲ್ಲಿ ವಜ್ರವರಾಹಿ ಮತ್ತು ಮರೀಚಿ ರೂಪಗಳಲ್ಲಿ ಪೂಜಿಸಲಾಗುತ್ತದೆ. ಅಷ್ಟ ವಾರಾಹಿಗಳು ಕೂಡ ಇದೆ: ಸ್ವಪ್ನ ವಾರಾಹಿ, ಮಹಿಷಾರೂಢ ವಾರಾಹಿ, ಆದಿ ವಾರಾಹಿ, ಲಘು ವಾರಾಹಿ, ಉನ್ಮತ್ತ ವಾರಾಹಿ, ಅಶ್ವಾರೂಢ ವಾರಾಹಿ, ಸಿಂಹಾರೂಢ ವಾರಾಹಿ, ಮಹಾ ವಾರಾಹಿ. ನಿಖರ ವಿಧಾನಗಳು ರಹಸ್ಯವಾಗಿರುತ್ತವೆ. ಅವಳು ಭೂಮಿಯ ಮೇಲ್ಪದರ ಮತ್ತು ಆಳಗಳ ದೇವತೆಯಾಗಿದ್ದು, ಹೆಚ್ಚಾಗಿ ಭೂಗತವಾಗಿ ವಾಸಿಸುತ್ತಾಳೆ. ಅವಳು ಭೂಮಿಯ ಅಡಿಯಲ್ಲಿರುವ ಎಲ್ಲವನ್ನೂ ಮತ್ತು ಭೂಮಿಯಿಂದ ಬೆಳೆಯುವ ಎಲ್ಲವನ್ನೂ ಆಶೀರ್ವದಿಸುವ ಮತ್ತು ರಕ್ಷಿಸುವ ದೇವತೆಯಾಗಿದ್ದಾಳೆ. ನೀವು ಧರ್ಮ ಮಾರ್ಗದಲ್ಲಿದ್ದರೆ ಮತ್ತು ನಿಮಗೆ ಭೂಮಿ ಇಲ್ಲದಿದ್ದರೆ ಅಥವಾ ಭೂಮಿ ವಿವಾದಗಳಿದ್ದರೆ, ನೀವು ವಾರಾಹಿ ಸಾಧನೆಯನ್ನು ಮಾಡಿ ಪರಿಹಾರ ಕಂಡುಕೊಳ್ಳಬಹುದು. ಈ ಆನ್ಲೈನ್ "ವಾರಾಹಿ ತಂತ್ರ ಸಾಧನಾ ಶಿಬಿರ"ದಲ್ಲಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ. ವಾರಾಹಿ ತಂತ್ರದ ಪ್ರಾಚೀನ ಮತ್ತು ರಹಸ್ಯ ಸಾಧನೆಗಳನ್ನು ಸ್ಥೂಲವಾಗಿ ಅನುಷ್ಠಿಸಿ. ಈ ಸ್ವಯಂ-ಪ್ರೇರಿತ ಸಾಧನಾ ಶಿಬಿರವು ವಾರಾಹಿಯ ಪವಿತ್ರ ಬೋಧನೆಗಳು ಮತ್ತು ಆಚರಣೆಗಳ ಕೆನೆಪದರದ ಅನ್ವೇಷಣೆಯನ್ನು ನೀಡುತ್ತದೆ. ಅನುಭವಿ ಅಭ್ಯಾಸಿಗಳ ಮಾರ್ಗದರ್ಶನದಲ್ಲಿ ವಾರಾಹಿಯ ಶಕ್ತಿ, ಮಂತ್ರಗಳು ಮತ್ತು ಆಚರಣೆಗಳ ರಹಸ್ಯಗಳನ್ನು ಕಂಡುಕೊಳ್ಳಿ. ನೀವು ಹೊಸಬರಾಗಿದ್ದರೂ ಅಥವಾ ಅನುಭವಿ ಆಧ್ಯಾತ್ಮಿಕ ಸಾಧಕರಾಗಿದ್ದರೂ, ಈ ಶಿಬಿರ ವರಾಹಿ ತಂತ್ರದ ಸಮಗ್ರ ಅನ್ವೇಷಣೆಯನ್ನು ಒದಗಿಸುತ್ತದೆ, ನಿಮ್ಮ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತದೆ. ಇಲ್ಲಿರುವ ವೆಚ್ಚವು ನೋಂದಣಿಗಾಗಿ, ಜಾಲತಾಣ ನಿರ್ವಹಣೆಗಾಗಿ, ಆಕರಗಳ ಸಂಗ್ರಹ ಮತ್ತು ಪ್ರಸ್ತುತಿಗಾಗಿ. ಜೊತೆಗೆ ಗೋಶಾಲೆಯ ನಿರ್ವಹಣೆಗಾಗಿ. ಹಣ ಕಟ್ಟಿದ ಮಾತ್ರಕ್ಕೆ ತಂತ್ರಸಾಧನೆ ಆಗುತ್ತದೆ ಎಂದಿಲ್ಲ. ಹಣ ಕಟ್ಟಿದ ಮೇಲೆ ಒಂದಿಷ್ಟಾದರೂ ಶ್ರದ್ಧೆಯಿಂದ ಅಧ್ಯಯನ, ಅಭ್ಯಾಸ ಮಾಡುವಿರೆಂಬ ಭರವಸೆ ಇದೆ. ಸಾಧಿಸುವವರು ನೀವು, ನಡೆದು ತೋರಿಸುವವರು ನಾವು. ಇಲ್ಲಿ ನಾಸ್ತಿಕರಿಗೆ, ವಿತಂಡ ವಾದಿಗಳಿಗೆ, ಅಪಾತ್ರರಿಗೆ ಅವಕಾಶವಿಲ್ಲ. ದುರ್ನಡತೆ, ಅಪಾತ್ರತೆ ಕಂಡುಬಂದಲ್ಲಿ ನೋಂದಣಿ ವೆಚ್ಚ ಮುಟ್ಟುಗೋಲು ಹಾಕಿಕೊಂಡು ನಿರ್ದಾಕ್ಷಿಣ್ಯವಾಗಿ ಹೊರಹಾಕಲಾಗುತ್ತದೆ. ದೇಶಕ್ಕಾಗಿ ಏನಾದರೂ ಒಳ್ಳೆಯದು ಮಾಡಬೇಕು ಎಂಬ ಸದುದ್ದೇಶ, ವಿಶಾಲ ಚಿಂತನೆ ಇರುವವರು ಮಾತ್ರ ಈ ತಂತ್ರಕ್ಕೆ ಸೇರಿ. ದೇಶದ ಹಿತದಲ್ಲಿ ಸ್ವಹಿತ ಅಡಗಿದೆ ಎಂಬುದನ್ನು ಮೊದಲು ಮನಗಾಣಿ. ಅಭ್ಯಾಸದ ಪರಿಯನ್ನು ಮನಗಂಡ ನಂತರವೇ ಮುಖತಃ ಉಪದೇಶ ಮತ್ತು ಕರ್ಮಕಾಂಡದ ಪ್ರಕ್ರಿಯೆಗಳನ್ನು ಪ್ರತ್ಯಕ್ಷವಾಗಿ ಮಾಡಿಸಲಾಗುವುದು. ಇದಕ್ಕೆ ಸಮೂಹ ಬೆಳೆಯಬೇಕು. ಆಗ ಸಿದ್ಧ ಯುದ್ಧ ವಿದ್ಯೆಯ ಭಾಗವಾದ ವಾರಾಹಿ ಯುದ್ಧ ತಂತ್ರಗಾರಿಕೆಯನ್ನೂ ಕಲಿಸಲಾಗುತ್ತದೆ.
You can also join this program via the mobile app. Go to the app