top of page

ಸಿರಿಭೂವಲಯದ ಪುಸ್ತಕ ಪಡೆಯಲು ಅರ್ಜಿ

ಹಾಸನದ ಶ್ರೀಯುತ ಸಿರಿಭೂವಲಯ ಸುಧಾರ್ಥಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಗಿರಿಜಾಶಂಕರ, ಇವರು ಶಾಸ್ತ್ರದಾನ ರೂಪದಲ್ಲಿ ಪ್ರಕಟಿಸಲು ಇಚ್ಛಿಸಿರುವ "ಸಿರಿಭೂವಲಯ ಅಂತರ್ಸಾಹಿತ್ಯ ದರ್ಶನ" ಎಂಬ ಅಂದಾಜು ೨೦೦೦ ಪುಟಗಳ ವ್ಯಾಪ್ತಿಯಲ್ಲಿ ಬರಲಿರುವ ನಾಲ್ಕೈದು ಪುಸ್ತಕಗಳನ್ನು ಉಚಿತವಾಗಿ ಪಡೆಯಲು ಪ್ರಕಟಣಾ ಪೂರ್ವದಲ್ಲಿಯೇ ಕಾಯ್ದಿರಿಸುವ ಅರ್ಜಿ ನಮೂನೆ ಇದು. ನಮಗೆ ಸಿಕ್ಕುವ ಪ್ರತಿಕ್ರಿಯೆಯನ್ನು ಆಧರಿಸಿ ಪ್ರತಿಗಳನ್ನು ಅಚ್ಚು ಹಾಕಿಸುತ್ತೇವೆ.

 

ಸೂಚನೆ:- ನಾವು ಒಬ್ಬೊಬ್ಬರಿಗೇ ಪುಸ್ತಕಗಳನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕರ್ನಾಟಕದ ಮಟ್ಟಿಗೆ ವಿತರಣೆಯ ಯೋಚನೆ ಇದ್ದು, ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಿಗೊಬ್ಬರು ಈ ಕನ್ನಡ ಸೇವೆಗಾಗಿ ತಮ್ಮನ್ನು ಮುಡಿಪಾಗಿಟ್ಟರೆ, ಅಂತಹವರು ತಮ್ಮಿಂದ ಎಷ್ಟು ಜನರಿಗೆ ತಲುಪಿಸಲು ಸಾಧ್ಯವೋ ಅಷ್ಟೂ ಜನರ ಹೆಸರು, ವಿಳಾಸ, ಇತ್ಯಾದಿಗಳನ್ನು ಈ ಅರ್ಜಿಯಲ್ಲಿ ಭರ್ತಿ ಮಾಡಿಸಬೇಕಾಗಿ ವಿನಂತಿ. ಪುಸ್ತಕಗಳನ್ನು ಹೇಗೆ ತಲುಪಿಸುವುದು ಎಂದು ಪರಸ್ಪರ ಮಾತನಾಡಿಕೊಂಡು ನಿರ್ಣಯಿಸಬಹುದು. ಇದು ಶಾಸ್ತ್ರದಾನವಾದ್ದರಿಂದ ಪಾತ್ರರಿಗೆ ಮಾತ್ರ ಪುಸ್ತಕ ದೊರಕಲಿ. ಅಪಾತ್ರದಾನವಾಗದಿರಲಿ. ಪಾತ್ರರು ಪುಸ್ತಕದ ಬದಲಿಗೆ ಏನಾದರೂ ಕೊಡಬೇಕೆಂದು ಇಚ್ಛಿಸಿದಲ್ಲಿ ನಮ್ಮ ಗೋಶಾಲೆಗಾಗಿ ಕೊಡಬಹುದು. ಏಕೆಂದರೆ ಗೋವುಗಳು ಭಾರತೀಯತೆಯ ಬೆನ್ನೆಲುಬು.

bottom of page