top of page

ಬಿಪಿ ನಿರ್ವಹಣೆಗೆ ಎಲೆಕ್ಟ್ರೋ ಆಕ್ಯುಪಂಕ್ಚರ್

  • Sep 4, 2022
  • 1 min read

Updated: Sep 10, 2022

ಪುನರಾವರ್ತಿತ ಎಲೆಕ್ಟ್ರೋ ಆಕ್ಯುಪಂಕ್ಚರ್ ರೋಸ್ಟ್ರಲ್ ವೆಂಟ್ರಲ್ ಲ್ಯಾಟರಲ್ ಮೆಡುಲ್ಲಾದಲ್ಲಿ ಎನ್ಕೆಫಾಲಿನ್ ಮೂಲಕ ಶೀತ-ಪ್ರೇರಿತ ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ


- ಮಿನ್ ಲಿ, ಸ್ಟೆಫನಿ ಸಿ. ಟಿಜೆನ್-ಎ-ಲೂಯಿ, ಝಿ-ಲಿಂಗ್ ಗುವೋ ಮತ್ತು ಜಾನ್ ಸಿ. ಲಾಂಗ್‌ಹರ್ಸ್ಟ್



ree

ಅಕ್ಯುಪಂಕ್ಚರ್ ಅಧಿಕ ರಕ್ತದೊತ್ತಡದಲ್ಲಿ ರಕ್ತದೊತ್ತಡವನ್ನು (ಬಿಪಿ) ಕಡಿಮೆ ಮಾಡುತ್ತದೆ, ಆದರೆ ಅದರ ಕ್ರಿಯೆಯ ಆಧಾರವಾಗಿರುವ ಕಾರ್ಯವಿಧಾನಗಳು ಸ್ಪಷ್ಟವಾಗಿಲ್ಲ. ಕ್ಲಿನಿಕಲ್ ಅಧ್ಯಯನಗಳನ್ನು ಅನುಕರಿಸಲು, ಈ ಸಂಶೋಧಕರು ಎಲೆಕ್ಟ್ರೋ ಆಕ್ಯುಪಂಕ್ಚರ್ (ಎ.ಆ) ಅನ್ನು ಅರಿವಳಿಕೆ ಮಾಡದ ಇಲಿಗಳಲ್ಲಿ ಶೀತ-ಪ್ರೇರಿತ ಅಧಿಕ ರಕ್ತದೊತ್ತಡದೊಂದಿಗೆ (ಸಿ.ಐ.ಹೆಚ್) ಆರು ವಾರಗಳ ಶೀತ ಮಾನ್ಯತೆ (6 °C) ನಿಂದ ಪ್ರೇರೇಪಿಸಿದ್ದರು. ಎಲೆಕ್ಟ್ರೋ ಆಕ್ಯುಪಂಕ್ಚರ್ (೦.೧-೦.೪ ಮಿಲಿ ಯಾಂಪ್, ೨ ಹರ್ಟ್ಜ್) ಅನ್ನು ಎಸ್. ಟಿ.೩೬-೩೭ ಅಕ್ಯುಬಿಂದುಗಳಲ್ಲಿ ಆಳವಾದ ಪೆರೋನಿಯಲ್ ನರಕ್ಕೆ 30 ನಿಮಿಷಗಳ ಕಾಲ, ಐದು ವಾರಗಳವರೆಗೆ ವಾರಕ್ಕೊಮ್ಮೆ ಎರಡು ಬಾರಿಯಂತೆ ಕೈಗೊಳ್ಳಲಾಯಿತು.



ree


ree

ಶಾನ್-ಎಲೆಕ್ಟ್ರೋ-ಆಕ್ಯುಪಂಕ್ಚರ್ ಅನ್ನು ಯಾವುದೇ ವಿದ್ಯುತ್ ಪ್ರಚೋದನೆಯನ್ನು ಹೊರತುಪಡಿಸಿ ಎಲೆಕ್ಟ್ರೋ ಆಕ್ಯುಪಂಕ್ಚರ್ ನಂತಹಾ ಕಾರ್ಯವಿಧಾನಗಳೊಂದಿಗೆ ನಡೆಸಲಾಯಿತು. ೧೮ ಸಿ.ಐ.ಹೆಚ್ ಇಲಿಗಳಲ್ಲಿ ಎಲೆಕ್ಟ್ರೋ ಆಕ್ಯುಪಂಕ್ಚರ್ ಚಿಕಿತ್ಸೆಯ ಆರು ಆವರ್ತನೆಗಳ ನಂತರ ಏರಿದ್ದ ಬಿಪಿ ಕಡಿಮೆ ಮಾಡಿತು ಮತ್ತು ೭೨ ಗಂಟೆಗಳ ಕಾಲ ಅದು ಕಡಿಮೆಯಿತ್ತು. ಆದರೆ ಶಾಮ್-ಎ.ಆ (n=12) ಮತ್ತು ಚಿಕಿತ್ಸೆ ನೀಡದ (n=6) ಸಿ.ಐ.ಹೆಚ್ ಗಳಲ್ಲಿ ಬಿಪಿ ಕಡಿಮೆ ಆಗಿರಲಿಲ್ಲ. ಶಾಮ್-ಎಲೆಕ್ಟ್ರೋ-ಆಕ್ಯುಪಂಕ್ಚರ್ (n=6), ಚಿಕಿತ್ಸೆ ನೀಡದ ಸಿ.ಐ.ಹೆಚ್ ಇಲಿಗಳು (n=6) ಮತ್ತು ನಾರ್ಮೊಟೆನ್ಸಿವ್ ನಿಯಂತ್ರಣ ಪ್ರಾಣಿಗಳಿಗೆ ಹೋಲಿಸಿದರೆ ೭೨ ಗಂಟೆಗಳ ನಂತರ ರೋಸ್ಟ್ರಲ್ ವೆಂಟ್ರೊಲೇಟರಲ್ ಮೆಡುಲ್ಲಾ (ಆರ್.ವಿ.ಎಲ್.ಎಂ) ನಲ್ಲಿ ಪ್ರಿಪ್ರೊಎನ್‌ಕೆಫಾಲಿನ್‌ನ ಎಂ.ಆರ್.ಎನ್.ಎ ಮಟ್ಟವು ಎಲೆಕ್ಟ್ರೋ ಆಕ್ಯುಪಂಕ್ಚರ್ ನೀಡಿದ ಇಲಿಗಳಲ್ಲಿ (n=9) ಹೆಚ್ಚಿತ್ತು. ಎಲೆಕ್ಟ್ರೋ ಆಕ್ಯುಪಂಕ್ಚರ್ ಚಿಕಿತ್ಸೆ ಮಾಡಿದ ಸಿ.ಐ.ಹೆಚ್ ಇಲಿಗಳ ಆರ್.ವಿ.ಎಲ್.ಎಂ ಗೆ ಡೆಲ್ಟಾ-ಒಪಿಯಾಡ್ ರಿಸೆಪ್ಟರ್ ವಿರೋಧಿಯಾದ ಐ.ಸಿ.ಐ ೧೭೪,೮೬೪ ಎಂಬ ಸೂಕ್ಷ್ಮಚುಚ್ಚುಮದ್ದಿನ ಪ್ರಯೋಗವು ಏರಿದ ಬಿಪಿಯ (n=4) ಮೇಲೆ ಆಗಿದ್ದ ಎಲೆಕ್ಟ್ರೋ ಆಕ್ಯುಪಂಕ್ಚರ್ ಪರಿಣಾಮವನ್ನು ಭಾಗಶಃ ಹಿಮ್ಮೆಟ್ಟಿಸಿತು. ಡೆಲ್ಟಾ-ಒಪಿಯಾಡ್ ವಿರೋಧಿ, ಡ್ಯಾಡಲ್ಲನ್ನು ಬಳಸಿಕೊಂಡು ಶಾಮ್-ಎಲೆಕ್ಟ್ರೋ-ಆಕ್ಯುಪಂಕ್ಚರ್ ನೊಂದಿಗೆ ಚಿಕಿತ್ಸೆ ನೀಡಿದ ಸಿ.ಐ.ಹೆಚ್ ಇಲಿಗಳ ಆರ್.ವಿ.ಎಲ್.ಎಂ ನ ಪ್ರಚೋದನೆಯು ಬಿಪಿಯನ್ನು ತಗ್ಗಿಸಿತು (n=6). ಪುನರಾವರ್ತಿತ ಎಲೆಕ್ಟ್ರೋ ಆಕ್ಯುಪಂಕ್ಚನ್ರಿಂದ ಪ್ರೇರಿತವಾದ ಆರ್.ವಿ.ಎಲ್.ಎಂ ನಲ್ಲಿ ಹೆಚ್ಚಿದ ಎನ್ಕೆಫಾಲಿನ್ ಎಲೆಕ್ಟ್ರೋ ಆಕ್ಯುಪಂಕ್ಚರಿನ ಬಿಪಿ ಕಡಿಮೆಗೊಳಿಸುವ ಕ್ರಿಯೆಗೆ ಕೊಡುಗೆ ನೀಡುತ್ತದೆ ಎಂದು ಈ ಮಾಹಿತಿಯು ಸೂಚಿಸುತ್ತದೆ.


ಆಕರ -



Li, M., Tjen-A-Looi, S., Guo, ZL. et al. Repetitive Electroacupuncture Attenuates Cold-Induced Hypertension through Enkephalin in the Rostral Ventral Lateral Medulla. Sci Rep 6, 35791 (2016). https://doi.org/10.1038/srep35791

bottom of page