top of page

🌿ಫ್ಲೂ/ವೈರಲ್ ಜ್ವರ/ಕೊರೋನಾಗೆ ಪ್ರಕೃತಿ ಚಿಕಿತ್ಸೆ🌿

Updated: Aug 18, 2022

🌴(Protocol by NISE - Natural Immunization Support Alliance)🌴





[1] 6 AM - 1 ಲೋಟ ಬಿಸಿ ನೀರಿನೊಂದಿಗೆ 3/4 ಚಮಚ ಉಪ್ಪು ಹಾಗೂ 1/2 ಚಮಚ ಅರಿಶಿನ ಸೇರಿಸಿ ಚೆನ್ನಾಗಿ ಬಾಯಿ ಮುಕ್ಕಳಿಸುವುದು.


[2] 6:15 AM - 1 ಚಿಟಿಕೆ ಒಣ ಶುಂಠಿ ಪುಡಿಯನ್ನು ಮೂಗಿನ ಎರಡೂ ಹೊಳ್ಳೆಗಳಿಂದ ನಶ್ಯ ರೂಪದಲ್ಲಿ ಎಳೆದುಕೊಳ್ಳುವುದು.


[3] 6:25 AM - ಅನುಲೋಮ ವಿಲೋಮ ಪ್ರಾಣಾಯಾಮ


[4] 6:30 AM - 1 ಲೋಟ ನೀರಿನಲ್ಲಿ 1/2 - 1 ಚಿಕ್ಕ ಚಮಚ ಅರಿಶಿನ + 2 ಚಿಟಿಕೆ ಕಾಳುಮೆಣಸು -> 5 ನಿಮಿಷ ಕುದಿಸಿ -> ಇಳಿಸಿ ತಣಿಸಿ -> ಬೆಲ್ಲ ಸೇರಿಸಿ ಹಾಗೂ 1/2 ಚಿಕ್ಕ ಚಮಚ ಹಸುವಿನ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಸೇರಿಸಿ -> ಸ್ವಲ್ಪಸ್ವಲ್ಪವೇ ಈ ಕಷಾಯವನ್ನು ಕುಡಿಯಿರಿ.


[5] 7:30 AM - ಒಂದು ಲೋಟ ಎಳನೀರು ಕುಡಿಯಿರಿ


[6] 8:00 AM - ಉಸಿರಾಟದ ಸಮಸ್ಯೆ ಇರುವವರಿಗೆ ಮಾತ್ರ - ಅರಳೀ/ಅಶ್ವತ್ಥ ಮರದ ಎಲೆಗಳ ಕಷಾಯ. ಮಾಡುವ ವಿಧಾನ:- 1/2 - 1 ಚಮಚ ಅರಶಿನ + 2 ಚಿಟಿಕೆ ಕಾಳುಮೆಣಸಿನ ಪುಡಿ -> 5 ನಿಮಿಷ ಕುದಿಸಿ -> ಮುಚ್ಚಿಟ್ಟು ತಣಿಸಿ -> ಬೆಲ್ಲ ಸೇರಿಸಿ ಹಾಗೂ 1/2 ಚಮಚ ಹಸುವಿನ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಸೇರಿಸಿ -> ಸ್ವಲ್ಪಸ್ವಲ್ಪವೇ ಕುಡಿಯಿರಿ.


[7] 8:30 AM - ಹಸಿರು ಜ್ಯೂಸ್ - ಸೌತೆಕಾಯಿ, ಸೋರೆಕಾಯಿ, ಬೂದುಕುಂಬಳಕಾಯಿ.


ಈ ಏಳು ವಿಧಾನಗಳನ್ನು ಪಾಲಿಸುವಾಗ ಸೂರ್ಯನ ಎಳೇ ಬಿಸಿಲಿಗೆ ನಿಮ್ಮ ಮೈಯೊಡ್ಡಿ, ಉದಯ ಸೂರ್ಯನನ್ನು ವೀಕ್ಷಿಸಿ (ಒಮ್ಮೆಗೆ 20 ಸೆಕೆಂಡ್ಗಳು ಮಾತ್ರ). ಹೀಗೆ 7-15 ದಿನಗಳು ಪಾಲಿಸಿ.


[8] 9:30 AM - ಕಷಾಯ:- ಅಮೃತಬಳ್ಳಿ (3-4 ಎಲೆಗಳು ಅಥವಾ 4 ಇಂಚಿನ ಕಾಂಡ) ಅಥವಾ ತುಳಸಿ (15-20 ಎಲೆಗಳು)


[9] 10:30 AM - ಒಂದು ಲೋಟ ಎಳನೀರು ಕುಡಿಯಿರಿ


[10] 11:30 AM - ಹಣ್ಣಿನ ಜ್ಯೂಸ್ (ಆಯಾ ಋತುಮಾನದಲ್ಲಿ ಬೆಳೆಯುವ ಸ್ಥಳೀಯ ಹಣ್ಣುಗಳು)


ಈ 8-10 ರವರೆಗಿನ ಅಭ್ಯಾಸವನ್ನು 3 ದಿನಗಳು ಅನುಸರಿಸಿ. ನಂತರದ ದಿನಗಳಲ್ಲಿ ಈ ಸಮಯಕ್ಕೆ ತಾಜಾ ಹಣ್ಣುಗಳನ್ನು ತಿನ್ನುತ್ತಾ ಬನ್ನಿ (ದೇಹ ರೂಕದ ಒಂದು ಕೆ.ಜಿ.ಗೆ 10 ಗ್ರಾಂ ನಂತೆ).


[11] 11:45 AM - ಕಾಲು ಚಮಚದಷ್ಟು ಒಣಶುಂಠಿಪುಡಿ ಅಥವಾ ಒಂದಿಂಚುದ್ದದ ಒಣಶುಂಠಿಯನ್ನು ನಾಲೆಯಲ್ಲಿಟ್ಟು ಚೀಪುತ್ತಿದ್ದು ಹಾಗೆಯೇ ಕರಗಲಿ. ಅದರ ನಾರನ್ನೂ ತಿನ್ನಿರಿ. ಇದನ್ನು 7-15 ದಿನಗಳು ಅನುಸರಿಸಿ.


[12] 1:00 PM - ಕಷಾಯ:- 1/2 - 1 ಚಮಚ ಅರಶಿನ.


[13] 2:00 PM - ಒಂದು ಲೋಟ ಎಳನೀರು ಕುಡಿಯಿರಿ


[14] 3:00 PM - ಹಣ್ಣಿನ ಜ್ಯೂಸ್ (ಆಯಾ ಋತುಮಾನದಲ್ಲಿ ಬೆಳೆಯುವ ಸ್ಥಳೀಯ ಹಣ್ಣುಗಳು)


[15] 4:00 PM - ಕಷಾಯ:- ಅಮೃತಬಳ್ಳಿ (3-4 ಎಲೆಗಳು ಅಥವಾ 4 ಇಂಚಿನ ಕಾಂಡ) ಅಥವಾ ತುಳಸಿ (15-20 ಎಲೆಗಳು).


12-15 ರವರೆಗಿನ ಅಭ್ಯಾಸವನ್ನು 3 ದಿನಗಳ ಕಾಲ ಅನುಸರಿಸಿ. ನಂತರದ ದಿನಗಳಲ್ಲಿ ಸಾಲಾಡ್ (ಹಸಿ ತರಕಾರಿ) ತಿನ್ನಿರಿ ( ದೇಹತೂಕದ ಒಂದು ಕೆ.ಜಿ.ಗೆ 5 ಗಾಂ ನಂತೆ). ಇದರ ನಂತರ ಸಿರಿಧಾನ್ಯಗಳ ಪೊಂಗಲ್ (ಖಿಚಡಿ) ಮಾಡಿ ತಿನ್ನಿರಿ.


[16] 4:30 PM - ಎಕ್ಕದ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಅದ್ದಿ ತೆಗೆದು ಬೆಂಕಿಯಲ್ಲಿ ಹದವಾಗಿ ಬಿಸಿ ಮಾಡಿ, ಉಗುರು ಬೆಚ್ಚಗಿರುವ ಆ ಎಲೆಗಳನ್ನು ನಿಮ್ಮ ಎದೆ, ಬೆನ್ನು, ಸೊಂಟ, ಕಾಲು, ಪಾದಗಳಿಗೆ ನೇವರಿಸುತ್ತಾ ಮಸಾಜ್ ಮಾಡಿ. ಶ್ವಾಸಕೋಶದಿಂದ ಕಫ ಇಳಿಯುವತನಕ ಇದನ್ನು ಪ್ರತಿನಿತ್ಯ ಮಾಡುತ್ತಿರಿ.


[17] 5:00 PM - ಒಂದು ಲೋಟ ಎಳನೀರು ಕುಡಿಯಿರಿ


[18] 6:00 PM - ಹಣ್ಣಿನ ಜ್ಯೂಸ್ (ಆಯಾ ಋತುಮಾನದಲ್ಲಿ ಬೆಳೆಯುವ ಸ್ಥಳೀಯ ಹಣ್ಣುಗಳು)


17-18 ರವರೆಗಿನ ಅಭ್ಯಾಸವನ್ನು 3 ದಿನಗಳ ಕಾಲ ಅನುಸರಿಸಿ. ನಂತರದ ದಿನಗಳಲ್ಲಿ ಸಾಲಾಡ್ (ಹಸಿ ತರಕಾರಿ) ತಿನ್ನಿರಿ (ದೇಹತೂಕದ ಒಂದು ಕೆ.ಜಿ.ಗೆ 5 ಗಾಂ ನಂತೆ). ಇದರ ನಂತರ ಸಿರಿಧಾನ್ಯಗಳ ಪೊಂಗಲ್ (ಖಿಚಡಿ) ಮಾಡಿ ತಿನ್ನಿರಿ.


[19] 7:00 PM ಆಡುಸೋಗೆ ಜ್ಯೂಸ್:- 3-4 ಎಳೆಯ ಆಡುಸೋಗೆ ಸೊಪ್ಪು, ಸಣ್ಣ ಒಣ ಶುಂಠಿ (1 ಸೆಂ.ಮಿ. ಕ್ಕಿಂತ ಹೆಚ್ಚಿರದಿರಲಿ), 5 ತುಳಸಿ ಎಲೆಗಳನ್ನು ಹಿಸುಕಿ ಸೇರಿಸಿ. ಈ ಜ್ಯೂಸಿಗೆ 3 ಹನಿ ಜೇನುತುಪ್ಪ ಸೇರಿಸಿ ಸೇವಿಸಿ.


[20] 8:00 PM ಉಸಿರಾಟದ ಸಮಸ್ಯೆ ಇರುವವರಿಗೆ ಮಾತ್ರ - ಅರಳೀ/ಅಶ್ವತ್ಥ ಮರದ ಎಲೆಗಳ ಕಷಾಯ. ಮಾಡುವ ವಿಧಾನ:- ಅರಳೀ/ಅಶ್ವತ್ಥದ ಎಲೆಗಳನ್ನು ನೀರಿಗೆ ಹಾಕಿ ಕುದಿರಿ ಅರ್ಧಾಂಶಕ್ಕೆ ಇಳಿಸಿಕೊಳ್ಳಿ. ಸೋಸಿಕೊಂಡು ಕುಡಿಯಿರಿ. ತೀವ್ರವಾದ ಸಮಸ್ಯೆ ಇದ್ದಲ್ಲಿ ಮಾತ್ರ ಅರಳಿಯ ಚಕ್ಕೆಯನ್ನು ಬಳಸಿ ಕಷಾಯ ಮಾಡುತ್ತಾ ಘಂಟೆಗೊಮ್ಮೆ ಕುಡಿಯುತ್ತಿರಿ.


[21] 7-9 PM - ಬೆಳಗ್ಗಿನಂತೆಯೇ ಬಾಯಿಯನ್ನು ಮುಕ್ಕಳಿಸಿ. ನಂತರ ಶುದ್ಧ ನೀರಿನ ಹಬೆಯನ್ನು (ಸ್ಟೀಮ್) ತೆಗೆದುಕೊಳ್ಳಿ. ನಂತರ ಬಾಳೆಹಣ್ಣಿನ ಕಷಾಯ ಮಾಡಿರಿ. ಇದನ್ನು ಹಿಂದೆ ಹೇಳಿರುವ ಕಷಾಯಗಳಂತೆಯೇ ತಯಾರಿಸುವುದು. ಆದರೆ ಸಿಪ್ಪೆಸಹಿತ ಬಾಳೇಹಣ್ಣನ್ನು ಕುದಿಸಿ ಸ್ವಲ್ಪಸ್ವಲ್ಪವೇ ಸೇವಿಸಿ ನಂತರ ಚೆನ್ನಾಗಿ ನಿದ್ದೆ ಮಾಡಿ.


ಆಧಾರ:- http://nisa.org.in


ಕನ್ನಡಕ್ಕೆ ಅನುವಾದ,

ಹೇಮಂತ್ ಕುಮಾರ್ ಜಿ

https://www.vedavidhya.com

https://www.veda-vijnana.blogspot.com

109 views0 comments

Comments

Rated 0 out of 5 stars.
No ratings yet

Commenting has been turned off.
bottom of page