top of page

ಸಮಗ್ರ ಸ್ವಾಸ್ಥ್ಯ ಮತ್ತು ಸಮಗ್ರ ಚಿಕಿತ್ಸೆಯ ಅವಧಾರಣೆ

  • Apr 23, 2021
  • 2 min read


ಸಮಗ್ರ ಸ್ವಾಸ್ಥ್ಯ ವಿಜ್ಞಾನದ ಪ್ರಯೋಜನ


"ಸ್ವಸ್ಥ ಮನುಷ್ಯರ ಸ್ವಾಸ್ಥ್ಯ ರಕ್ಷಣೆ ಹಾಗೂ ರೋಗಿಯ ರೋಗದ ನಿವಾರಣೆ"

(ಚರಕ ಸೂತ್ರ ಸ್ಥಾನ - ೩೦).


ಸಮಗ್ರ ಸ್ವಸ್ಥ ಮನುಷ್ಯರ ಲಕ್ಷಣ


ಯಾವ ಮನುಷ್ಯರ ದೋಷ, ಧಾತು, ಮಲ ರಚನೆ ಹಾಗೂ ಕಾರ್ಯವು ವ್ಯವಸ್ಥಿತವಾಗಿ (ಸಾಮ್ಯ) ಇರುತ್ತದೆಯೋ, ಯಾರ ಜೀವನ (ಮನ, ಆತ್ಮಾ) ಹಾಗೂ ಇಂದ್ರಿಯಗಳು ಪ್ರಸನ್ನವಾಗಿರುತ್ತವೆಯೋ, ಅವರೇ ಸ್ವಸ್ಥ ಮನುಷ್ಯರು (ಸುಶ್ರುತ).


  • ಸಮಗ್ರ ಸ್ವಸ್ಥ ಮನುಷ್ಯ = ಶರೀರ ಹಾಗೂ ಜೀವನದಲ್ಲಿ ವ್ಯವಸ್ಥಿತವಾಗಿರುವ ಮನುಷ್ಯ.

  • ವ್ಯವಸ್ಥೆ = ಸ್ವಾಸ್ಥ್ಯ

  • ಅವ್ಯವಸ್ಥೆ = ರೋಗ


ವ್ಯವಸ್ಥೆಯ ನಾಲ್ಕು ಆಯಾಮಗಳು


೧. ಶರೀರ ರಚನಾ ವ್ಯವಸ್ಥೆ:- ಐದೂ ಕರ್ಮೇಂದ್ರಿಯಗಳು ಹಾಗೂ ಜ್ಞಾನೇಂದ್ರಿಯಗಳನ್ನು ಸಂಚಾಲನೆಯಲ್ಲಿಟ್ಟುಕೊಳ್ಳಲು ಬೇಕಾದ ಸಮರ್ಥವೂ ಅವಶ್ಯಕವೂ ಆದ ಎಲ್ಲಾ ಅಂಗ-ಪ್ರತ್ಯಂಗಗಳ ಸಮತೋಲನವು ಕಾರ್ಯ-ರೂಪೀ ರಚನೆಯೇ ಶರೀರ ರಚನಾ ವ್ಯವಸ್ಥೆ.


೨. ಶರೀರ ಕಾರ್ಯ ವ್ಯವಸ್ಥೆ:- ಮನ ಹಾಗೂ ಇಂದ್ರಿಯಗಳ ಸಮತೋಲನೆಯುಳ್ಳ ಕಾರ್ಯ ಪ್ರಣಾಳಿಕೆಯೇ ಶರೀರ ಕಾರ್ಯ ವ್ಯವಸ್ಥೆ.


೩. ಜೀವನ ವ್ಯವಸ್ಥೆ:- ಚಯನ, ಆಸ್ವಾದನೆ, ಸಂಕಲ್ಪ, ಅನುಭವ ಹಾಗೂ ಪ್ರಾಮಾಣಿಕತೆಯ ಸಮತೋಲನೆಯುಳ್ಳ ಪ್ರಕಾಶನವೇ ಜೀವನ ವ್ಯವಸ್ಥೆ.


೪. ಶರೀರದಲ್ಲಿ ಜೀವನ ವ್ಯವಸ್ಥೆ:- ಸ್ವಸ್ಥ ಶರೀರ ಹಾಗೂ ಸ್ವಸ್ಥ ಜೀವನದ ಸಂಯುಕ್ತ ರೂಪದಲ್ಲಿ, ಸ್ವಸ್ಥ ಮನುಷ್ಯರೇ, ಶರೀರದಲ್ಲಿ ಜೀವನ ವ್ಯವಸ್ಥೆ ಹೊಂದಿರುವವರಾಗಿರುತ್ತಾರೆ.


ಅವ್ಯವಸ್ಥೆಗಳ ವಿವೇಚನೆ


೧. ಶರೀರ ರಚನಾ ಅವ್ಯವಸ್ಥೆ:- ನೈಸರ್ಗಿಕತೆ, ಆನುವಂಶಿಕತೆ ಹಾಗೂ ಪತಿ-ಪತ್ನಿಯರ ಆಹಾರ-ವಿಹಾರ ಅಸಮತೋಲನದಿಂದ ಶರೀರ ರಚನೆಯಲ್ಲಿ ಅವ್ಯವಸ್ಥೆಯಾಗುತ್ತದೆ.


೨. ಶರೀರ ಕಾರ್ಯ ಅವ್ಯವಸ್ಥೆ:- ಜ್ಞಾನೇಂದ್ರಿಯಗಳು ಹಾಗೂ ಕರ್ಮೇಂದ್ರಿಯಗಳ ಕಾರ್ಯದಲ್ಲಿ ಬಾಧಕ-ದೋಷ-ಧಾತು-ಮಲ ಹಾಗೂ ನೈಸರ್ಗಿಕತೆ-ಪೋಷಣೆ-ಸಂರಕ್ಷಣೆಯ ಕಾರ್ಯಗಳಲ್ಲಿ ವ್ಯತಿರೇಕವೇ ಶರೀರ ಕಾರ್ಯ ಅವ್ಯವಸ್ಥೆ.


೩. ಜೀವನ ಅವ್ಯವಸ್ಥೆ:- ಭ್ರಮೆ, ಭ್ರಮಿತ ಸಂಸ್ಕಾರ ಪರಂಪರೆ, ಅತಿ ವ್ಯಾಪ್ತಿ, ಅನಾವ್ಯಾಪ್ತಿ ಹಾಗೂ ಅವ್ಯಾಪ್ತಿಯ ರೂಪದಲ್ಲಿ ಜೀವನ ಅವ್ಯವಸ್ಥೆಯಾಗುತ್ತದೆ.


೪. ಶರೀರ ಹಾಗೂ ಜೀವನ ಅವ್ಯವಸ್ಥೆ:- ಮೇಲ್ತಿಳಿಸಿದ ಮೂರೂ ಅವ್ಯವಸ್ಥೆಗಳ ಸಂಯುಕ್ತ ರೂಪದ ಪ್ರಕಾಶನವೇ ಶರೀರ ಹಾಗೂ ಜೀವನ ಅವ್ಯವಸ್ಥೆಯಾಗಿದೆ.


ಅವ್ಯವಸ್ಥೆಗಳನ್ನು (ರೋಗ) ಗುರುತಿಸುವ ಮೂರು ಮಾರ್ಗಗಳು


೧. ದೋಷಾ ಆನುವಾಂಶಿಕ ವಿಧಿ:- ದೋಷ, ಧಾತು, ಮಲದ ಅಸಂತುಲತೆಯನ್ನು ಗುರುತಿಸುವ ವಿಧಿಯೇ ದೋಷಾ ಆನುವಾಂಶಿಕ ವಿಧಿ.


೨. ಲಕ್ಷಣಾ ಆನುವಾಂಶಿಕ ವಿಧಿ:- ರೋಗಿಯು ತಾನೇ ಲಕ್ಷಣಗಳನ್ನು ವ್ಯಕ್ತಪಡಿಸುತ್ತಿದ್ದಾನೆ. ಅದನ್ನು ಗುರುತಿಸುವುದೇ ಲಕ್ಷಣಾ ಆನುವಾಂಶಿಕ ವಿಧಿ.


೩. ಕ್ರಿಮಿಕೀಟಾಣು ಆನುವಾಂಶಿಕ ವಿಧಿ:- ಶರೀರ ಶೋಷಕ ಕ್ರಿಮಿಕೀಟಗಳನ್ನು ಗುರುತಿಸುವುದು ಕ್ರಿಮಿಕೀಟಾಣುವಾಂಶಿಕ ವಿಧಿ.


ಸಮಗ್ರ ಚಿಕಿತ್ಸೆ


ಸ್ವಸ್ಥ ಮನುಷ್ಯರನ್ನು ಗುರುತಿಸುವುದು ಹಾಗೂ ಅವ್ಯವಸ್ಥಿತ ಮನುಷ್ಯರ ಉಪಚಾರವೇ ಸಮಗ್ರ ಚಿಕಿತ್ಸೆಯಾಗಿದೆ.


ಸಮಗ್ರ ಚಿಕಿತ್ಸೆಯ ನಾಲ್ಕು ಆಯಾಮಗಳು


೧. ಕಿರಣ-ವಿಕಿರಣ ಚಿಕಿತ್ಸೆ:- ಶರೀರದಲ್ಲಿ ಪ್ರಯುಕ್ತ ಕೋಶಗಳು ಹಾಗೂ ಅವುಗಳಿಂದ ರಚಿತ ಅಂಗ-ಪ್ರತ್ಯಂಗಗಳಲ್ಲಿ ಸಮೀಚೀನ ಕಾರ್ಯ ಶಿಥಿಲತೆಯನ್ನು ದೂರೀಕರಿಸುವ ಪ್ರಯೋಜನೆಗೆ ಕಿರಣಗಳು ಉಪಯೋಗಿ. ಯಾವುದೇ ಅಂಗ ಅವಯವದ ಸ್ವಸ್ಥ ಕಾರ್ಯ ಪ್ರಣಾಳಿಕೆಗಳಲ್ಲಿ ಅವರೋಧ ಉಂಟುಮಾಡುವುದಕ್ಕಾಗಿ ಉತ್ಪನ್ನವಾದ ಉಪರಚನಾ ಅವ್ಯವಸ್ಥೆಯ ಗತಿಯನ್ನು ತಡೆಯುವ ಕಾರ್ಯವನ್ನು ವಿಕಿರಣಗಳು ಮಾಡುತ್ತವೆ.


೨. ಶಬ್ದ-ತರಂಗ ಚಿಕಿತ್ಸೆ:- ತರಂಗ, ನಾದ, ಗತಿ, ಲಯ, ಶಬ್ದ ಇವುಗಳು ಭ್ರಮೆಯನ್ನು ನಿರ್ಭ್ರಮೆಯನ್ನಾಗಿಸಲು ಶಬ್ದತರಂಗ ಚಿಕಿತ್ಸೆಯಲ್ಲಿ ಉಪಯೋಗಿಯಾಗಿವೆ.


೩. ಔಷಧೀ ಹಾಗೂ ನೈಪುಣ್ಯತಾ ಚಿಕಿತ್ಸೆ:- ಶರೀರ ರಚನೆ ಹಾಗೂ ಕಾರ್ಯಗಳಲ್ಲಿ ಸಂತುಲತೆಯನ್ನು ಮಾಡಿಡುವುದಕ್ಕಾಗಿ ಔಷಧ ಹಾಗೂ ನುರಿತ ನೈಪುಣ್ಯತೆಯ ಮುಖೇನ ಚಿಕಿತ್ಸಾ ಪ್ರಯೋಗವಾಗುತ್ತದೆ.


೪. ಅಭ್ಯಾಸ ಚಿಕಿತ್ಸೆ:- ಮೂರು ಆಯಾಮಗಳಲ್ಲಿ ಅಭ್ಯಾಸ ಚಿಕಿತ್ಸೆಯು ಸಂಪಾದಿತವಾಗುತ್ತದೆ.


೪.೧ ಕರ್ಮಾಭ್ಯಾಸ:- ಆಹಾರ, ವಿಹಾರ, ಶಬ್ದ, ಅರ್ಥ, ಮುದ್ರಾ, ಅಂಗ-ಆಹಾರ ಪೂರ್ವಕ ಸಂಪ್ರೇಷಣೆ, ಕಾರ್ಯ ಕಲಾಪ; ಇದು ಕರ್ಮ ಅಭ್ಯಾಸ ಎನ್ನಿಸಿಕೊಳ್ಳುತ್ತದೆ.


೪.೨ ವ್ಯವಹಾರಾಭ್ಯಾಸ:- ಸಂಬಂಧಗಳ ಅನುರೂಪೀ ಸಂಬೋಧನೆ ಹಾಗೂ ಮೌಲ್ಯಗಳ ನಿರ್ವಹಣೆಯು ವ್ಯವಹಾರ ಅಭ್ಯಾಸ ಎನ್ನಿಸಿಕೊಳ್ಳುತ್ತದೆ.


೪.೩ ಚಿಂತನಾಭ್ಯಾಸ:- ಜೀವನದಲ್ಲಿ ಆಂತರಿಕ ಸಂಬಂಧಗಳ ಪರೀಕ್ಷೆ, ನಿರೀಕ್ಷಣಾ ಪೂರ್ವಕ ಸಮತೋಲನವನ್ನು ಸ್ಥಾಪಿಸುವುದು, ಫಲಿತಾಂಶದಲ್ಲಿ ನಿರ್ಭ್ರಮರಾಗುವುದು. ಜೀವನ ಮತ್ತು ಶರೀರದ ಒಳ-ಸಂಬಂಧಗಳನ್ನು ಗುರುತಿಸುವುದು. ನಿರ್ವಹಣೆ ಮಾಡುವಲ್ಲಿ ನಿರ್ಭ್ರಮರಾಗುವುದು. ಇದು ಚಿಂತನಾ ಅಭ್ಯಾಸ ಎನ್ನಿಸಿಕೊಳ್ಳುತ್ತದೆ.


ಸಮಗ್ರ ಚಿಕಿತ್ಸಾ ಪ್ರಯೋಗ


೧. ಶರೀರ ರಚನಾ ಅವ್ಯವಸ್ಥೆಯಲ್ಲಿ ಕೆಳಕಂಡ ಎರಡು ಉಪಚಾರಗಳ ಪ್ರಯೋಗ ಮಾಡಿ:

೧.೨ ಔಷಧಿ ಹಾಗೂ ನೈಪುಣ್ಯತೆಯಿಂದ ಚಿಕಿತ್ಸೆ.

೧.೩ ಕಿರಣ-ವಿಕಿರಣ ಚಿಕಿತ್ಸೆ.


೨. ಶರೀರ ಕಾರ್ಯ ಅವ್ಯವಸ್ಥೆಗಳಲ್ಲಿ ಕೆಳಕಂಡ ಮೂರು ಉಪಚಾರಗಳ ಪ್ರಯೋಗ ಮಾಡಿ:

೨.೧ ಔಷಧಿ ಹಾಗೂ ನೈಪುಣ್ಯತೆಯ ಚಿಕಿತ್ಸೆ.

೨.೨ ಕಿರಣ-ವಿಕಿರಣ ಚಿಕಿತ್ಸೆ.

೨.೩ ಕರ್ಮಾಭ್ಯಾಸ ಚಿಕಿತ್ಸೆ.


೩. ಜೀವನ ಅವ್ಯವಸ್ಥೆಯಲ್ಲಿ ಕೆಳಕಂಡ ಎರಡು ಉಪಚಾರಗಳ ಪ್ರಯೋಗ ಮಾಡಿ:

೩.೧ ಶಬ್ದ ತರಂಗ ಚಿಕಿತ್ಸೆ

೩.೨ ಅಭ್ಯಾಸ ಚಿಕಿತ್ಸೆ


೪. ಶರೀರ ಹಾಗೂ ಜೀವನ ಅವ್ಯವಸ್ಥೆಯಲ್ಲಿ ಕೆಳಕಂಡ ನಾಲ್ಕೂ ಉಪಚಾರಗಳ ಪ್ರಯೋಗ ಮಾಡಿ:

೪.೧ ಕಿರಣ-ವಿಕಿರಣ ಚಿಕಿತ್ಸೆ.

೪.೨ ಶಬ್ದ ತರಂಗ ಚಿಕಿತ್ಸೆ

೪.೩ ಔಷಧಿ ಹಾಗೂ ನೈಪುಣ್ಯತೆಯ ಚಿಕಿತ್ಸೆ.

೪.೪ ಅಭ್ಯಾಸ ಚಿಕಿತ್ಸೆ.


ಆಕರ:- ಡಾ. ಓ.ಪಿ. ತಿವಾರಿ ಮತ್ತು ನಾಗರಾಜ ಬಾಬಾರವರ ಸಂಶೋಧನೆಗಳು.


- ಹೇಮಂತ್ ಕುಮಾರ್ ಜಿ

bottom of page