top of page

ಮಂತ್ರ ವಿಜ್ಞಾನದ ವಿಧಾನ


#ವೇದಮಂತ್ರ_ದೂಷಿಸುತ್ತಾ_ತಮಗೆ_ನಿಜವಾಗಿ_ಅರಿವೇ_ಇಲ್ಲದ_ಕುಂಡಲಿನಿ_ಚಕ್ರಗಳ_ಭ್ರಮಾ_ಲೋಕದಲ್ಲಿ_ತೇಲುತ್ತಾ_ನಕಲಿ_ಅಧ್ಯಾತ್ಮ_ಹೇಳುವವರಿಗೂ_ಒಂದು_ಪಾಠಮಂತ್ರದ ನಿಜವಾದ ಮೂಲ ಕುಂಡಲಿನಿ. ಎಲ್ಲಾ ಮಂತ್ರಗಳು ಪರಾವಾಕ್ ಕುಂಡಲಿನಿಯಲ್ಲಿ ವಿಲೀನಗೊಂಡಿವೆ. ಕುಂಡಲಿನಿ ಬಿಂದುರೂಪಾ ಮಹಾಮಾಯೆ. ಕುಂಡಲಿನಿಯಿಂದ ಮಂತ್ರವನ್ನು ಹೊರಸೂಸಿದಾಗ, ಅದು ಶುದ್ಧ ಬೆಳಕಿನ ರೂಪವನ್ನು ಪಡೆದುಕೊಳ್ಳುತ್ತದೆ. ಅರಿವಿನ ಈ ಶುದ್ಧ ಬೆಳಕು ಚೈತನ್ಯ ಶಕ್ತಿಯ ಒಂದು ಹೆಸರಾಗಿದೆ.


ಇನ್ನು ಪಶ್ಯಂತಿ ಭೂಮಿಯ ಸ್ಥಿತಿ. ಈ ಸ್ಥಿತಿಯಲ್ಲಿ ಮಂತ್ರವು ಚೈತನ್ಯಾತ್ಮಕ ಮತ್ತು ಬೋಧರೂಪವಾಗಿದೆ. ಪುನಃ ಇದು ಶಬ್ದ ಮತ್ತು ಅರ್ಥದ ಅಭಿನ್ನ ರೂಪವಾಗಿದೆ. ಇಲ್ಲಿ ಮಾತ್ರ ಶಬ್ದವೇ ಅರ್ಥವು, ಅರ್ಥವೇ ಶಬ್ದವು.


ಪಶ್ಯಂತಿ ಭೂಮಿಯಿಂದ, ಚೈತನ್ಯವಾಕ್ ಅಥವಾ ಶಬ್ದ ನಾದವು ಮಧ್ಯಮಾ ಭೂಮಿಯಲ್ಲಿ ಮೂಡುತ್ತದೆ. ಈ ನಾದವು ತರಂಗಾತ್ಮಕವಾಗಿದೆ. ಇದು ಶಬ್ದದೊಂದಿಗೆ ಮತ್ತು ಶಬ್ದದ ಅರ್ಥದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಈ ಅರ್ಥವೇ ಮಂತ್ರವು ಪ್ರತಿಪಾದಿಸಿದ ದೇವತೆ. ಇದು ಮನೋರಾಜ್ಯದ ವಿಷಯ.


ಈ ಮಧ್ಯಮಾ ಭೂಮಿಯಿಂದ ವೈಖರಿ ಭೂಮಿಯನ್ನು ಪ್ರವೇಶಿಸುವ ಸಮಯದಲ್ಲಿ, ಬಾಹ್ಯ ಗಾಳಿಯ ಸ್ಪರ್ಶದಿಂದ ಸ್ಥೂಲ ಭಾವ ಪ್ರಾಪ್ತವಾಗಿ ಕಂಠದಿಂದ ಉಚ್ಚಾರವಾಗುತ್ತದೆ. ಶಿಷ್ಯನು ಗುರುವಿನಿಂದ ವೇದಮಂತ್ರವನ್ನು ಕೇಳಿಸಿಕೊಂಡಾಗ, ಶಬ್ದವು ಶಿಷ್ಯನ ಕರ್ಣವನ್ನು ಹೊಕ್ಕು ಹೃದಯ ಪ್ರದೇಶಕ್ಕೆ ಹೋಗುತ್ತದೆ. ಇದು ಬೀಜ ಬಿತ್ತನೆಯಂತಹ ವ್ಯವಹಾರವಾಗಿದೆ. ಈ ಮಂತ್ರವು ಬೀಜ ಸ್ವರೂಪವಾಗಿದ್ದರೂ, ಚಿಚ್ಛಕ್ತಿಯಿಂದ ಅನುಪ್ರಾಣಿತ ಬೀಜವಾಗಿದೆ.


ಶಿಷ್ಯನ ಹೃದಯ ಪ್ರದೇಶವನ್ನು ಪ್ರವೇಶಿಸಿ, ಅವನು ಮಾಡಿದ ಜಪಾದಿಗಳಿಂದ ಲಾಲಿತ ಪಾಲಿತವಾಗಿ, ಅಂಕುರಿತವಾಗಿ, ಶಿಷ್ಯನ ಮನೋಭೂಮಿಯನ್ನು ಆಶ್ರಯಿಸಿ ಕಾಲಾಂತರದಲ್ಲಿ ಚೈತನ್ಯಭೂಮಿಯನ್ನು ಪ್ರವೇಶಿಸುತ್ತದೆ. ಆಗ ಮಂತ್ರಸಿದ್ಧಿ ಮತ್ತು ಸಾಕ್ಷಾತ್ಕಾರವಾಗುತ್ತದೆ.

189 views0 comments

Recent Posts

See All
bottom of page