ನ್ಯೂರೋಫೀಡ್ಬ್ಯಾಕ್ (NFB), ನ್ಯೂರೋಥೆರಪಿ ಎಂದೂ ಕರೆಯಲ್ಪಡುತ್ತದೆ, ಇದು ಒಂದು ರೀತಿಯ ಬಯೋಫೀಡ್‌ಬ್ಯಾಕ್ ಆಗಿದ್ದು, ಇದು ಆಪರೇಟಿಂಗ್ ಕಂಡೀಷನಿಂಗ್ ಮೂಲಕ ಆರೋಗ್ಯಕರ ಮೆದುಳಿನ ಕಾರ್ಯವನ್ನು ಬಲಪಡಿಸುವ ಸಲುವಾಗಿ ಮೆದುಳಿನ ಚಟುವಟಿಕೆಯಿಂದ ನೈಜ-ಸಮಯದ ಪ್ರತಿಕ್ರಿಯೆಯನ್ನು ಪ್ರಸ್ತುತಪಡಿಸುತ್ತದೆ. ಎಲೆಕ್ಟ್ರೋ ಎನ್ಸೆಫಾಲೋ ಗ್ರಾಫಿಕ್ (EEG) ಬಯೋ ಫೀಡ್‌ಬ್ಯಾಕ್ ಎಂಬುದು ನ್ಯೂರೋ ಫೀಡ್‌ಬ್ಯಾಕ್ ಎಂದು ಜನಪ್ರಿಯವಾಗಿದೆ. ಇದರ ಸಂಶೋಧನೆಯು ಸುಮಾರು 1970 ರಲ್ಲಿ ಆರಂಭವಾಯಿತು. ಮೊದಲು ಪ್ರಾಣಿಗಳ ಮೇಲೆ ಅಧ್ಯಯನಗಳು ನಡೆದವು. ಜೊತೆಗೆ ಅನಿಯಂತ್ರಿತ ಎಪಿಲೆಪ್ಸಿ ಮತ್ತು ಆತಂಕದ ಚಿಕಿತ್ಸೆಗೆ ಬಳಕೆಯಾಯಿತು. ವಿಶಿಷ್ಟವಾದ ನ್ಯೂರೋಫೀಡ್‌ಬ್ಯಾಕ್ ತರಬೇತಿಯು ನೆತ್ತಿಯ ಮೇಲೆ ಒಂದು ಅಥವಾ ಹೆಚ್ಚಿನ; ಕಿವಿಯೋಲೆಗಳ ಮೇಲೆ ಒಂದು ಅಥವಾ ಎರಡು ವಿದ್ಯುದ್ವಾರಗಳನ್ನು ಇರಿಸುವುದನ್ನು ಒಳಗೊಂಡಿರುತ್ತದೆ. ಇಇಜಿ ಉಪಕರಣವು ಮೆದುಳಿನ ಚಟುವಟಿಕೆಯ ಬಗ್ಗೆ ತತ್‌ಕ್ಷಣದ ನೈಜ-ಸಮಯದ ಪ್ರತಿಕ್ರಿಯೆ ಒದಗಿಸುತ್ತದೆ. ಸಾಮಾನ್ಯವಾಗಿ ಅದರ ಬಗ್ಗೆ ಯಾವುದೇ ಅರಿವು ಇಲ್ಲದಿರುವುದರಿಂದ ಮೆದುಳಿನ ತರಂಗ ಚಟುವಟಿಕೆಯ ಮೇಲೆ ವಿಶ್ವಾಸಾರ್ಹವಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ. ಆದರೆ ಈ ಅರಿವನ್ನು ನಮಗೆ ಇದು ಸಂಭವಿಸಿದ ನಂತರ ಒಂದು ಸೆಕೆಂಡಿನ ಕೆಲವು ಸಾವಿರ ಭಾಗಾಂಶದ ಒಳಗೆ ಒದಗಿಸಿದರೆ ಮೆದುಳಿನ ಚಟುವಟಿಕೆಯನ್ನು ಕ್ರಮೇಣ ಮರುರೂಪಿಸುವ ಅವಕಾಶ ಸಿಗುತ್ತದೆ. ಇದನ್ನು ಸಾಧಿಸುವ ಕಾರ್ಯವಿಧಾನವನ್ನು ಸಾಮಾನ್ಯವಾಗಿ ಆಪರೆಂಟ್ ಕಂಡೀಷನಿಂಗ್ ಎಂದು ಪರಿಗಣಿಸಲಾಗುತ್ತದೆ. ಆಹಾರ ಮತ್ತು ಔಷಧ ಸಂಸ್ಥೆಯು (FDA) ನ್ಯೂರೋಫೀಡ್ಬ್ಯಾಕ್’ಅನ್ನು ವಿಶ್ರಾಂತಿ ನೀಡುವ ಸಲುವಾಗಿ ಮಾತ್ರ ಅನುಮೋದಿಸಿದೆ. ಆದ್ದರಿಂದ ತಯಾರಕರು ಅಂತಹ ಉದ್ದೇಶಕ್ಕೆ ಮಾತ್ರ ಅದರ ಬಳಕೆಯನ್ನು ಕಾನೂನುಬದ್ಧವಾಗಿ ಜಾಹೀರಾತು ಮಾಡಬಾಹುದು. ವೈದ್ಯರು ನ್ಯೂರೋಫೀಡ್ಬ್ಯಾಕ್ ಅನ್ನು ಅವರ ಪದವಿ ಆಧಾರಿತ ಪರವಾನಗಿಯ ಅಭ್ಯಾಸ ಮತ್ತು ತರಬೇತಿಯ ವ್ಯಾಪ್ತಿಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ಸಂಶೋಧನೆ ಫಲಿಂತಾಂಶವು ಸಾಮಾನ್ಯವಾಗಿ ನಡೆಯುತ್ತಿರುವ ಅಭ್ಯಾಸ ಅವಧಿಗಳೊಂದಿಗೆ ಸರಿಸುಮಾರು 75-80% ಜನರ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಮರುತರಬೇತಿಗೊಳಿಸಬಹುದು, ಇದು ಗಮನ ಕೊರತೆಯ ಅಸ್ವಸ್ಥತೆ (ADD - Attention Deficit Disorder / ADHD - Attention Deficit Hyperactivity Disorder), ಕಲಿಕೆಯಲ್ಲಿ ಅಸಮರ್ಥತೆ, ಆತಂಕ, ಖಿನ್ನತೆ, ತಲೆ ಆಘಾತಗಳು, ನಿದ್ರಾಹೀನತೆ, ಉನ್ಮಾದ, ವ್ಯಸನಗಳು, ಇತ್ಯಾದಿಗಳಂತಹಾ ವ್ಯಾಪಕ ಶ್ರೇಣಿಯ ಪರಿಸ್ಥಿತಿಗಳಲ್ಲಿನ ಗಮನಾರ್ಹ ಸುಧಾರಣೆಗಳನ್ನು ನೀಡುತ್ತದೆ.
ಸಾಮಾನ್ಯವಾಗಿ ನ್ಯೂರೋಫೀಡ್‌ಬ್ಯಾಕ್ ಚಿಕಿತ್ಸಕರು ಇತರ ಆವರ್ತನಗಳನ್ನು ಬಲಪಡಿಸುವಾಗ ಕೆಲವು ಮಿದುಳು ತರಂಗಗಳ ಆವರ್ತನಾ ಪಟ್ಟಿಗಳನ್ನು (ಉದಾ - ಥೀಟಾ) ಪ್ರತಿಬಂಧಿಸಲು ಪ್ರಯತ್ನಿಸುತ್ತಾರೆ (ಉದಾ - ಬೀಟಾ). ಗಣಕ ಪರದೆಯು ಎರಡು ಬಾರ್ ಗ್ರಾಫ್‌ಗಳಷ್ಟು ಸರಳವಾಗಿರಬಹುದು ಅಥವಾ ವೀಡಿಯೊ ಅನಿಮೇಷನ್‌ಗಳಂತೆ ಅತ್ಯಾಧುನಿಕವಾಗಿರಬಹುದು. ಉದಾಹರಣೆಗೆ, ಒಂದು ಬಾರ್ ಗ್ರಾಫ್ ನಾವು ಪ್ರತಿಬಂಧಿಸಲು ಬಯಸುವ ಅನುಚಿತವಾದ ಮೆದುಳಿನ ತರಂಗ ಚಟುವಟಿಕೆಯನ್ನು ಪ್ರತಿನಿಧಿಸಬಹುದು. ನಾವು ಹೆಚ್ಚಿಸಲು ಬಯಸುವ ಹೆಚ್ಚು ಸೂಕ್ತವಾದ ಚಟುವಟಿಕೆಯೊಂದಿಗೆ ಇನ್ನೊಂದು ಸಂಬಂಧಿಸಿದೆ. ರೋಗಿಯು ಗಣಕ ಪರದೆಯ ಮೇಲೆ ಗಮನ ಕೇಂದ್ರೀಕರಿಸಿದಾಗ ಸೂಕ್ತವಲ್ಲದ ಚಟುವಟಿಕೆಯನ್ನು ಬಯಸಿದಲ್ಲಿ ನಿಗದಿತ ಸಾಂಖ್ಯಾಮಿತಿಗಿಂತ ಕಡಿಮೆ ಮಾಡಲು, ಜೊತೆಗೆ ಸೂಕ್ತವಾದ ಚಟುವಟಿಕೆಯ ಬಯಕೆಯು ಒಂದು ನಿರ್ದಿಷ್ಟ ಸಂಖ್ಯಾಮಿತಿಗಿಂತ ಸ್ವಲ್ಪಮಟ್ಟಿಗೆ ಹೆಚ್ಚಾಗುತ್ತದೆ. ಈ ಬದಲಾವಣೆಗಳನ್ನು ಅರ್ಧ ಸೆಕೆಂಡಿಗೆ ನಿರ್ವಹಿಸಲಾಗುತ್ತದೆ. ರೋಗಿಯು ಇದನ್ನು ಪರದೆಯ ಮೇಲೆ ನೋಡುತ್ತಾರೆ ಮತ್ತು ರಿಂಗಣಗುಟ್ಟುವ ಘಂಟಾನಾದ ಅಥವಾ ವಿಶೇಷ ಧ್ವನಿಸುವ ನಾದದ ಮೂಲಕ ಮಾಹಿತಿ ನೀಡಲಾಗುತ್ತದೆ. ಇದೇ ರೀತಿ ಮತ್ತೊಂದು ಭಾರತೀಯ ವೈದ್ಯರ ಕೊಡುಗೆ ಎಂದರೆ ವಿದ್ಯುತ್ ಪ್ರೇಷಿತ ಸೂಚೀವೇಧ ಆಧರಿತ ಮೆದುಳು ಪ್ರಚೋದನೆ (Non-invasive Brain Stimulation). ಇದು ಮತ್ತೆ ಮತ್ತೆ ಹಲವು ಭಾರಿ ಪುನರಾವರ್ತಿತವಾಗುತ್ತಿದ್ದಂತೆ, ರೋಗಿಯ ಮೆದುಳಿನ ಕಾರ್ಯವಾಹಿಯು ಪುನರುಜ್ಜೀವನಗೊಳ್ಳುತ್ತದೆ. ತರಬೇತಿ ಪಡೆದ ಚಿಕಿತ್ಸಕ ಇರುವಾಗ ರೋಗಿಗೆ ಸಕ್ರಿಯವಾಗಿ ತರಬೇತಿ ನೀಡಲು, ಮತ್ತು ಹಲವಾರು ಸಲ ಚಿಕಿತ್ಸೆ ಕೊಡುವುದರ ಮೂಲಕ ಬದಲಾವಣೆಗಳನ್ನು ಸಮರ್ಪಕವಾಗಿ ಬಲಪಡಿಸಿದಾಗ, ಆರೋಗ್ಯಕರ ಮೆದುಳಿನ ನಿದರ್ಶನಗಳು ಹೆಚ್ಚುತ್ತವೆ. ಮಾದಕ ದ್ರವ್ಯ ಸೇವನೆ ಅಥವಾ ತಲೆಗೆ ಗಾಯದಂತಹಾ ಋಣಾತ್ಮಕ ಪರಿಣಾಮ ಬೀರದಿದ್ದರೆ ಮಿದುಳಿನ ಕಾರ್ಯಚಟುವಟಿಕೆಯು ಸಹಿಸಿಕೊಳ್ಳುವುದು.
ನ್ಯೂರೋಫೀಡ್‌ಬ್ಯಾಕ್‌ಗೆ ವಿವಿಧ ವಿಧಾನಗಳು 40 ವರ್ಷಗಳಿಂದ ಅಭಿವೃದ್ಧಿಯಾಗುತ್ತಾ ಬಂದಿವೆ. ಇದರಲ್ಲಿ ಪ್ರಮುಖ ವಿಧಾನಗಳೆಂದರೆ:
Traditional Neurofeedback and Symptom-Based Approaches
qEEG-Guided Neurofeedback
Live Z-Score Training
LORETA and BrainAvatar Neurofeedback Training
The Low-Energy Neurofeedback System (LENS)
Slow Cortical Potentials Training (SCPs)
Homoencephalography Training (HEG)
Infra-Low Frequency (ILF) Neurofeedback
fMRI Neurofeedback
Therapeutic Approaches to Brain Stimulation
Electroconvulsive Therapy (ECT)
Repetitive Transcranial Magnetic Stimulation (rTMS)
Deep Brain Stimulation (DBS)
Vagal Nerve Stimulation (VNS)
Transcranial Direct Current Stimulation (tDCS)
Cranial Electrotherapy Stimulation (CES)
NeuroField
Audiovisual Stimulation (AVS)
Dry Needle & Electrical Impulse Based Non-Invasive Brain Stimulation (NIBS)
ಬ್ರಾಹ್ಮೀ ಆಯುರ್ವೇದ ಕ್ಲಿನಿಕ್ ಈ 19ನೇಯದಾದ ಭಾರತೀಯ ವೈದ್ಯಕೀಯ ಸಂಶೋಧನೆಯ ಮೂಲದ ವಿದ್ಯುತ್ ಪ್ರೇಷಿತ ಸೂಚೀವೇಧ ಆಧರಿತ ಮೆದುಳು ಪ್ರಚೋದನೆಯನ್ನು ಒಂದು ಪರ್ಯಾಯ ಚಿಕಿತ್ಸಾ ಪದ್ಧತಿಯಾಗಿ ಬಳಸಿಕೊಂಡಿದೆ. ಇದರಲ್ಲಿ ಬಹಳಷ್ಟು ಚಿಕಿತ್ಸಾ ಸಾಫಲ್ಯತೆ ಕಂಡಿದೆ.
You can book an online appointment with Vedavidhya Consultants.
Yorumlar