top of page

ಕಾಲಚಕ್ರ - ೧

ಯಾವುದು ಜನರ "ಕಾಮನ್‌ಸೆನ್ಸ್"ಗೆ ವಿರುದ್ಧವಾಗಿರುತ್ತದೋ ಅಂತಹಾ ವಿಷಯ ಅವರಿಗೆ ಇಷ್ಟವಾಗುವುದಿಲ್ಲ. "ಕಾಮನ್‌ಸೆನ್ಸ್"ಗೆ ವಿರುದ್ಧವಾದದ್ದು ಯಾವುದೇ ಇದ್ದರೆ ಅದು ನಾನ್‌ಸೆನ್ಸ್ ಆಗುತ್ತದೆ. ಬ್ರಹ್ಮ, ಆತ್ಮಾ, ಕರ್ಮಫಲ, ಜ್ಯೋತಿಷ, ಐನ್‌ಸ್ಟೈನ್‌ ಸಾಪೇಕ್ಷತಾವಾದ, ಮುಂತಾದವುಗಳು "ಕಾಮನ್‌ಸೆನ್ಸ್‌"ಗೆ ವಿರುದ್ಧವಾಗಿವೆ. ಆದ್ದರಿಂದ ಸತ್ಯವಾಗಿದ್ದರೂ ಪುಸ್ತಕಗಳಲ್ಲಿ ಬಂಧಿಯಾಗಿದೆ. ವ್ಯವಹಾರದಲ್ಲಿ "ಕಾಮನ್‌ಸೆನ್ಸ್‌"ನ ಅಧಿರಾಜ್ಯವಿದೆ. ಆದರೆ "ಕಾಮನ್‌ಸೆನ್ಸೇ" ನಾನಸೆನ್ಸ್‌. ಸೆನ್ಸ್‌ಗಳ ಬಿಡಿಭಾಗಗಳಾದ ಇಂದ್ರಿಯಗಳ ಮೂಲಕ ಪಡೆದ ಜ್ಞಾನವು ಅಜ್ಞಾನವಾಗಿದೆ, ಬ್ರಹ್ಮವನ್ನು ಭ್ರಮಿಸುವ ಮಾಯೆಯ ಪಂಚಭೌತಿಕ ಪ್ರಪಂಚವಾಗಿದೆ. ಆಧುನಿಕ ಭೌತಿಕವಿಜ್ಞಾನವೂ ನಮ್ಮ ಇಂದ್ರಿಯ ಅನುಭವ ಸತ್ಯವಲ್ಲ ಎಂದು ಸಿದ್ಧಪಡಿಸಿದೆ. ಆದರೂ ನಾವು ಗಟ್ಟಿಯಾಗಿ ನಮ್ಮ ಪ್ರತಿಯೊಂದು ಅನುಭವದ ಮಿತಿಯೊಳಗೆ ಯೋಚಿಸುತ್ತೇವೆ; ಏಕೆಂದರೆ ನಾವು ವೈಯಕ್ತಿಕ 'ಏಕವಚನ ವ್ಯಕ್ತಿತ್ವ' (ಜೀವ) ಅನುಭವಿಸುತ್ತೇವೆ. ಆದರೆ ಅದು ಕೇವಲ ಒಂದು ಭ್ರಮೆ ಮಾತ್ರ.


ಏಕವಚನದ ಹಂತದಲ್ಲಿ “ವೈಯಕ್ತಿಕ ಅಸ್ತಿತ್ವ” (singular individual existence) ಒಂದು ಭ್ರಮೆ. ಜೀವದ ಅಸ್ತಿತ್ವ ಕೇವಲ ಒಂದು ಭ್ರಮೆಯೇ. ಅದರಲ್ಲಿ ಎರಡು ವಸ್ತುಗಳಿವೆ - ಚೈತನ್ಯ ಮತ್ತು ಜಡ. ಚೈತನ್ಯ ಆತ್ಮ ಮತ್ತು ಜಡ ಪ್ರಕೃತಿ ಸೇರಿದ್ದು ಜೀವಾವಸ್ಥೆಯೇ. ಚೈತನ್ಯ ಆತ್ಮ ಕೇವಲ ಒಂದೇ, ಅದೇ ಬ್ರಹ್ಮ. ಅದರಲ್ಲಿ ಅನೇಕತೆಯ ಕಲ್ಪನೆ ಭ್ರಮೆಯೇ. ಜೀವ ಈ ಸತ್ಯವನ್ನು ಪಡೆದಾಗ ಜೀವಾವಸ್ಥೆಯಿಂದ ಮುಕ್ತವಾಗುತ್ತದೆ. ಮುಕ್ತ ಅವಸ್ಥೆಯಲ್ಲಿ ಎಲ್ಲಾ ದೇವತೆಗಳು, ಋಷಿಗಳು ಮತ್ತು ಎಲ್ಲಾ ಮುಕ್ತ ವ್ಯಕ್ತಿಗಳು ಪರಸ್ಪರ ಪ್ರತ್ಯೇಕ ಅಸ್ತಿತ್ವವನ್ನು ಹೊಂದಿದರೂ ಒಂದೇ ಆಗಿದ್ದಾರೆ ಯಾಕೆಂದರೆ ಅವರ ಸತ್ಯ ಕೇವಲ ಚೈತನ್ಯ ತತ್ವವೇ ಆಗಿದೆ ಮತ್ತು ಅದು ಒಂದೇ ಆಗಿದೆ. ಆ "ಏಕ ಸತ್ಯ"ವನ್ನು ವಿವಿಧ ಪರಿಸ್ಥಿತಿಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ಆದರೆ ಈ "ವಿವಿಧ ಪರಿಸ್ಥಿತಿಗಳೇ" ಈ ಆಟವನ್ನು ರಚಿಸುತ್ತವೆಯೇ? ಒಂದೇ ಸತ್ಯವನ್ನು ವಿವಿಧ ಹೆಸರು-ರೂಪಗಳಾಗಿ ಬದಲಾಯಿಸುತ್ತವೆಯೇ? ಈ ವಿವಿಧ ನಾಮ-ರೂಪಗಳು ತಮ್ಮ ತಮ್ಮ ಅನುಭವದ ಮಿತಿಯೊಳಗೆ ಕಠಿಣವಾಗಿ ಯೋಚಿಸುತ್ತವೆ ಮತ್ತು ಆ 'ಏಕ ವ್ಯಕ್ತಿಗತ ಅಸ್ತಿತ್ವ'ವನ್ನು ಪರಮ ಸತ್ಯವೆಂದು ಭಾವಿಸುತ್ತವೆ. ಈ ಜೈವಿಕ ಅಸ್ತಿತ್ವದ ಭ್ರಾಂತಿಗೆ ಉದಾಹರಣೆಗಳನ್ನು ನೋಡೋಣ.


ಭೌತಿಕ ವಿಜ್ಞಾನದಲ್ಲಿಯೂ ಇಂಥ ಭ್ರಮೆಗಳು ಹಲವಿವೆ. ಇಲ್ಲಿ ಎರಡು ಉದಾಹರಣೆಗಳನ್ನು ನೀಡುತ್ತೇನೆ. ಯಾವುದು ಭೌತಿಕ ವಿಜ್ಞಾನದ ಬಗ್ಗೆ ನಮ್ಮ ಧಾರಣೆಯನ್ನು ಬದಲಾಯಿಸಿವೆ? ಈಗ ಒಂದು ಭ್ರಮೆಯಾಗಿ ಸಿದ್ಧವಾಗಿರುವ ನಮ್ಮ ಸಾಮಾನ್ಯ ಅನುಭವದ ರೈಖಿಕ ಸಮಯ (ಅನುಭವದ ಲಿನಿಯರ್ ಟೈಮ್). ಹೊಲೋಗ್ರಾಫಿಕ್ ಸಿದ್ಧಾಂತ ಹೇಳುತ್ತದೆ ನಾವು ಒಂದು ಭ್ರಮೆಯಲ್ಲಿ ಬಾಳುತ್ತಿದ್ದೇವೆ.


ಮೊದಲು "ಲಿನಿಯರ್ ಟೈಮ್"ಅನ್ನು ಪರಿಗಣಿಸೋಣ. ಮೂರು ಮಹಾನ್ ಭೌತಿಕ ವಿಜ್ಞಾನಿಗಳು ವಾಸ್ತವಿಕ ಪ್ರಪಂಚದಲ್ಲಿ ಲಿನಿಯರ್ ಟೈಮಿನ ಅಸ್ತಿತ್ವವಿಲ್ಲ ಎಂದು ಸಿದ್ಧಪಡಿಸಿದ್ದಾರೆ; ಲಿನಿಯರ್ ಟೈಮ್ ಒಂದು ಮನೋವೈಜ್ಞಾನಿಕ ಪರಿಘಟನೆ ಮಾತ್ರ (ಇದು ನನ್ನ ಅಭಿಪ್ರಾಯವಲ್ಲ, ಆಧುನಿಕ ಭೌತಶಾಸ್ತ್ರದ ನಂಬಿಕೆಯು ಲಿನಿಯರ್ ಟೈಮ್ ಒಂದು ಮಾನಸಿಕ ಭ್ರಮೆ ಎಂದು ಹೇಳುತ್ತದೆ). ಸಾಮೂಹಿಕ ಅಜ್ಞಾನದ ಮಾನಸಿಕ ವಿಕಾರ!


ನಮಗೆ ಪ್ರಾಪ್ತವಾಗುವ ಪ್ರಪಂಚದ ಇಂದ್ರಿಯ ಅನುಭವ ಯಾವಾಗಲೂ ವಾಸ್ತವಿಕ ಕಾಲದ ದಿಕ್ಕಿನಿಂದ ಅಜ್ಞಾತವಾಗಿದೆ.


ನಮ್ಮ "ಇಂದ್ರಿಯ ಕಾಲವು" ಒಂದು 'ಮಾನಸಿಕ ಬಾಣ'ವಾಗಿದೆ, ಕಾಲದಲ್ಲಿ ಹರಿಯುವ ಒಂದು ನದಿಯಂತೆ. ಯಾವತ್ತೂ ನೋಡುವವರ ದೃಷ್ಟಿಯಲ್ಲಿ ಭೂತಕಾಲದಿಂದ ಭವಿಷ್ಯತ್ತಿನ ಕಡೆಗೆ ಖಂಡಿತ ಪ್ರವಾಹ ಹರಿಯುತ್ತದೆಯೇ ಹೊರತು ಅಖಂಡ ಪ್ರವಾಹವಲ್ಲ. ನಮ್ಮ ಅನುಭವದಲ್ಲಿ ಪ್ರಪಂಚದ ಸಂಜ್ಞಾನ ಅಖಂಡವಲ್ಲ, ಬದಲಿಗೆ ವಿವಿಧ ಕಾಲ ಖಂಡಗಳಲ್ಲಾಗುತ್ತದೆ. ವಾಸ್ತವಿಕ ಪ್ರಪಂಚವು ದಿಕ್ಕು ಮತ್ತು ಕಾಲದ ಎಲ್ಲಾ ಆಯಾಮಗಳಲ್ಲಿ ಬೇರೆಯೇ ಆಗಿದೆ. ನಮ್ಮ ಅನುಭವದ ಪ್ರಪಂಚವು ವಿವಿಧ ಖಂಡಗಳ ಮಾನಸಿಕ ಆಭಾಸಿಕ ಪ್ರಪಂಚವಾಗಿದೆ - ದಿಕ್ಕು ಮತ್ತು ಕಾಲದ ಎರಡೂ ಆಯಾಮಗಳಲ್ಲಿ.


ದಿಗ್ಭ್ರಮೆಯನ್ನು "ಹೊಲೋಗ್ರಾಫಿಕ್ ಸಿದ್ಧಾಂತ"ನಲ್ಲಿ ತೋರಿಸುತ್ತೇನೆ, ಮೊದಲು ಕಾಲಭ್ರಮೆಯನ್ನು ಹೇಳಿಕೊಡುತ್ತೇನೆ. ಭೌತಶಾಸ್ತ್ರದಲ್ಲಿ ಘಟನೆಗಳ ಬದಲಾವಣೆಯ ವೇಗವನ್ನು "ಸಮಯ" ಎಂದು ಕರೆಯುತ್ತಾರೆ. ಭೌತಶಾಸ್ತ್ರದಲ್ಲಿ ಯಾವುದೇ ಸಾರ್ವತ್ರಿಕ ಮತ್ತು ಸಾರ್ವಭೌಮ "ಸಮಯ"ವನ್ನು ಹುಡುಕಲಾಗಿಲ್ಲ, ಅದು ಸಮ ವೇಗದಲ್ಲಿ ನೇರ ಗೆರೆಯಲ್ಲಿ ಹರಿಯುವುದು ಮತ್ತು ಎಲ್ಲಾ ಘಟನೆಗಳಿಗೆ ಅನ್ವಯಿಸುವುದು. ಈ ರೈಖಿಕ ಸಮಯ ಒಂದು ಭ್ರಮೆಯಾಗಿದೆ, ಆದರೆ ಆಶ್ಚರ್ಯದ ವಿಷಯವೆಂದರೆ ಎಲ್ಲಾ ಮಾನವರಲ್ಲೂ ಈ ಸಾಮೂಹಿಕ ಭ್ರಮೆಯನ್ನು ಕಂಡುಹಿಡಿಯಬಹುದು. ಇದನ್ನು ಸಾಮೂಹಿಕ ಅಚೇತನಕ್ಕೆ ಹೊಂದಿಸಲಾಗುತ್ತದೆ.


ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಒಂದೇ ರೀತಿಯ "ಟೈಮ್" ಇದ್ದುದರಿಂದ ಇಂಥ ಸಮಸ್ಯೆ ಉಂಟಾಗುತ್ತದೆ. ಸಂಸ್ಕೃತದಲ್ಲಿ "ಸಮಯ" ಮತ್ತು "ಕಾಲ" ಪರಸ್ಪರ ಭಿನ್ನ ವಸ್ತುಗಳಾಗಿವೆ. ಯಾವಾಗಲೂ ಸಮ ವೇಗದಲ್ಲಿ ಹರಿಯುವುದು ಸಮಯವಾಗಿದೆ, ಅದನ್ನು ಇಂದು ರೈಖಿಕ ಸಮಯವಾಗಿ ಕರೆಯಲಾಗುತ್ತದೆ. ಗಡಿಯಾರಗಳು ಇದೇ ಸಮಯವನ್ನು ತೋರಿಸುತ್ತವೆ, ಆದರೆ ಭೂಮಿ ಅಥವಾ ಸೀಜ಼ಿಯಂ ಪರಮಾಣುಗಳ (Cesium-133) ಮೇಲೆ ಆಧಾರಿತ ಈ ಸಮಯದೊಂದಿಗೆ ಭೌತಿಕ ಘಟನೆಗಳ ಹೊಂದಾಣಿಕೆ ಇಲ್ಲದೆ ಭೌತಶಾಸ್ತ್ರದಲ್ಲಿ ಅದು ಭ್ರಮಾತ್ಮಕ ಎಂದು ಪರಿಗಣಿಸಲಾಗಿದೆ.


ಆದರೆ ಈ ಸಮ ಸಮಯವು ಭ್ರಮಾತ್ಮಕವಲ್ಲ; ಇದು ಅಭೌತಿಕ ಸೂರ್ಯಸಿದ್ಧಾಂತದ ಸೂರ್ಯನ ಮೇರುವಿನ ಸಾಪೇಕ್ಷ ವೇಗದ ಮೇಲೆ ಆಧಾರಿತವಾಗಿದೆ. ಈ ವೇಗವು ದೀರ್ಘವೃತ್ತಾಕಾರ ಮಾರ್ಗದ ಕಾರಣ ಸಮವಾಗಿರಲಾರದು ಮತ್ತು ಕೇವಲ ಸೂರ್ಯಘಟಿಕಾ ಯಂತ್ರದಲ್ಲಿ ವಿರುದ್ಧ ದೃಷ್ಟಿಪಕ್ಷ ಸಂಸ್ಕಾರದ ಮೂಲಕ ಇದರ ಸಂಜ್ಞಾನ ಪ್ರಾಪ್ತವಾಗುತ್ತದೆ. ಆದರೆ ಇದರ ದೀರ್ಘಕಾಲಿಕ ಸರಾಸರಿ "ಮಧ್ಯಮ ಸಮಯ" ಸಮವಾಗಿದೆ ಮತ್ತು ಬ್ರಹ್ಮಸ್ವರೂಪ ಚೈತನ್ಯ ಆಕಾಶದಲ್ಲಿ ಸ್ಥಾನ-ಪರಿವರ್ತನೆಯ ಗತಿಯ ಸೂಚಕವಾಗಿದೆ. ಇಂದ್ರಿಯ ದೃಷ್ಟಿಪಕ್ಷದಲ್ಲಿ ಈ ಸೌರ ಸಮಯವು ಭ್ರಮಾತ್ಮಕವಾಗಿ ಕಾಣುತ್ತದೆ.


ಆದರೆ ಪ್ರತಿಯೊಂದು ಜೀವಿಯೊಳಗೆ ಬ್ರಹ್ಮವಿದೆ, ದುಷ್ಟಾತ್ಮರಲ್ಲಿ ಮತ್ತು ವಿಶೇಷವಾಗಿ ಕಲಿಯುಗದಲ್ಲಿ ಅದು ಅಚೇತನದ ಅಡಿಯಲ್ಲಿ ಮುಚ್ಚಲ್ಪಟ್ಟಿರಬಹುದು; ಆದ್ದರಿಂದ ಪ್ರತಿಯೊಂದು ಮನಸ್ಸಿನ ಸಾಮೂಹಿಕ ಮಟ್ಟದಲ್ಲಿ ಸಮಯದ ಈ ನದಿ ಸಮ ವೇಗದಲ್ಲಿ ಹರಿಯುತ್ತದೆ.


ಭೌತಿಕ ವೈಜ್ಞಾನಿಕ ಪರಿಶೀಲನೆಯಲ್ಲಿ ಕಾಲದ ಖಂಡಗಳು ಪತ್ತೆಯಾಗುವ ಕಾರಣವು ಸ್ಯೂಡೋಸ್ಫೆರಿಕಲ್ ಸ್ಪೇಸ್-ಟೈಮ್ ಕಾಂಟಿನ್ಯುಮ್‌ನಲ್ಲಿ ಕಾಲಚಕ್ರದ ಒಂದು ವಲಯದ ದರ್ಶನ ಒಮ್ಮೆಯೇ ಆಗುತ್ತದೆ ಮತ್ತು ಈ ಪರಿಶೀಲನೆಯು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ಇರುವುದಿಲ್ಲ, ಹಾಗೆಯೇ ಯಾವುದೇ ವಲಯವನ್ನು ಲಂಬದಿಕ್ಕಿನಲ್ಲಿ ನೋಡಿದಾಗ ಅದು ಸರಳ ರೇಖೆಯಂತೆ ತೋರುತ್ತದೆ. ಸ್ಯೂಡೋಸ್ಫೆರಿಕಲ್ ಸ್ಪೇಸ್-ಟೈಮ್‌ನ ಪೂರ್ಣಾಹುತಿ ಎಲ್ಲಿ ನಿಂತಿದೆಯೋ ಅಲ್ಲಿ ಅದರ ದಿಕ್ಕು ಲಂಬವಾಗಿ ಹೊಂದುತ್ತದೆ.


ಸ್ಯೂಡೋಸ್ಫೆರಿಕಲ್ ಸ್ಪೇಸ್-ಟೈಮ್‌ನ ಆರಂಭಿಕ ಬಿಂದುವು “ಸೃಷ್ಟಿಕಾಲ” ಮತ್ತು ಅಂತ್ಯವು “ಸಂಹಾರಕಾಲ” ಆಗಿದೆ. ಹೀಗಾಗಿ ಈ ಚಕ್ರದ ಕೊನೆಯು ಸಂಹಾರದಲ್ಲೇ ಆಗುತ್ತದೆ, ಆದ್ದರಿಂದ ಸೂರ್ಯಸಿದ್ಧಾಂತದಲ್ಲಿ ಹೇಳಲಾಗಿದೆ - ಕಾಲದ ಎರಡು ವಿಭಾಗಗಳು ಇವೆ, ಕಲನಾತ್ಮಕ ಮತ್ತು ಸಂಹಾರಾತ್ಮಕ. ಕಲನಾತ್ಮಕ ಕಾಲವೇ “ಸಮಯ” ಆಗಿದೆ, ಇದು ಒಂದೇ ಆಗಿದೆ ಮತ್ತು ಯಾವಾಗಲೂ ಸಮ ಇರುತ್ತದೆ. ಸಂಹಾರಾತ್ಮಕ ಕಾಲದ ಲೆಕ್ಕವಿಲ್ಲದಷ್ಟು ಭೇದಗಳಿವೆ ಯಾಕೆಂದರೆ ಇದು ಘಟನೆಗಳ ಮೇಲೆ ಅವಲಂಬಿಸಿದೆ. ಭೌತಿಕ ಘಟನೆಗಳಲ್ಲಿ ಗಣಿತೀಯ ಕಾಲ ಅಥವಾ "ಸಮಯ" ಕಾಣುವುದಿಲ್ಲ ಏಕೆಂದರೆ ಅದು ಸೌರಪಕ್ಷೀಯ ವಸ್ತುವಾಗಿದೆ, ಆದ್ದರಿಂದ ಅದನ್ನು ಮಾನಸಿಕ ಭ್ರಮಯೆಂದು ಹೇಳುತ್ತಾರೆ. ಪ್ರತಿ ವ್ಯಕ್ತಿಗೆ ಒಂದೇ "ಸಮಯ" ಭ್ರಮೆ ಏಕೆ ಆಗುತ್ತದೆ, ಬೇರೆ ಬೇರೆ ಸಮಯಗಳು ಏಕೆ ಕಾಣುವುದಿಲ್ಲ? ಎಂಬುದರ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳುವುದಿಲ್ಲ.


"ಹೋಲೋಗ್ರಾಫಿಕ್ ಸಿದ್ಧಾಂತ" ಹೇಳುತ್ತದೆ ನಾವು (ಸ್ಯೂಡೋಸ್ಫೇರಿಕಲ್ ಸ್ಪೇಸ್-ಟೈಮ್ ಕಾಂಟಿನ್ಯೂಮ್ ನ) ಆಯಾಮಗಳ ಗೋಡೆಯ ಮೇಲೆ ವಾಸಿಸುತ್ತೇವೆ ಮತ್ತು ನಮ್ಮ ಅನುಭವದ ದೃಶ್ಯವು ಈ ಗೋಡೆಯ ಪ್ರಕ್ಷೇಪಣವಾಗಿದೆ. ಈ ಸಿದ್ಧಾಂತದ ಆಳವಾದ ಪರಿಣಾಮವನ್ನು ಅವಲೋಕಿಸದೆ, ಸಂಕ್ಷೇಪದಲ್ಲಿ ಈ ಸಿದ್ಧಾಂತವು ಗುಹೆಯ ಗೋಡೆಯ ಮೇಲೆ ಛಾಯೆಯು ಹೇಗೆ ಬರುತ್ತದೆ ಎಂಬುದನ್ನು ಸೂಚಿಸುತ್ತದೆ, ಇದು ದಾರ್ಶನಿಕ ಪ್ಲೇಟೋವಿನ ಗುಹೆ-ರೂಪಾಂತರದ ಸರಳ ಉದಾಹರಣೆ. ಇಂದ್ರಿಯಗಳ ಅನುಭವಕ್ಕೆ ಬರುವಂತೆಯೇ ವಾಸ್ತವಿಕತೆ ಇಲ್ಲ. ಬೌದ್ಧ ದರ್ಶನದಲ್ಲಿ ಇದನ್ನು ಪ್ರತೀತಿ-ಸಮುತ್ಪಾದ ಎಂದಿದೆ. ನಮ್ಮ ಸಾಂಸಾರಿಕ ಅಥವಾ ಇಂದ್ರಿಯ ಅನುಭವವು ಮಾನಸಿಕ ಪ್ರತೀತಿಗಳ ಒಂದು ಶೃಂಖಲೆಯಾಗಿದೆ. ಇದರಲ್ಲಿ ವಿವಿಧ ಪ್ರತೀತಿಗಳು ವಿವಿಧ ಖಂಡಗಳ ರೂಪದಲ್ಲಿ ಪರಸ್ಪರ ಜೋಡಿಸುತ್ತವೆ.


ನಮ್ಮ ಯಾವ ಅಚೇತನವೆಂಬ ಸಾಮೂಹಿಕ ಪ್ರತೀತಿಯ ಕಾಮನ್‌ಸೆನ್ಸ್ ಇದೆಯೋ, ಇದು ಕೂಡಾ ಬದಲಾವಣೆಯಾಗುತ್ತದೆ. ಎಲ್ಲರ ಚೇತನಾ ಮೂಲತಃ ಒಂದೇ ಆಗಿದೆ. ಇದು ಈಗ ಹಾಸ್ಯಾಸ್ಪದವಾಗಿ ಕಾಣಬಹುದು, ಆದರೆ ಯೋಗಾಭ್ಯಾಸ ಮಾಡುವ ಮೂಲಕ ಸಾಕ್ಷಾತ್ತಾಗಿ ಕಾಣುತ್ತದೆ.


(ಸಶೇಷ)


ಹಿಂದಿ ಮೂಲ - ಶ್ರೀ ವಿನಯ್ ಝಾ ಗುರೂಜಿ, ವಾರಣಾಸಿ

ಕನ್ನಡಕ್ಕೆ - ಹೇಮಂತ್ ಕುಮಾರ್ ಜಿ, ಚಿಕ್ಕಮಗಳೂರು

Recent Posts

See All

Comments

Rated 0 out of 5 stars.
No ratings yet

Add a rating
bottom of page