ಭಾರತೀಯ ಸಂಸ್ಕೃತಿಯಲ್ಲಿ ಮನುಷ್ಯ ಜೀವನವನ್ನು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ೪ ಪುರುಷಾರ್ಥಗಳಲ್ಲಿ ವಿಭಜಿಸಲಾಗಿದೆ. ಕಾಮದ ಸ್ಥಾನವು ೪ ಪುರುಷಾರ್ಥಗಳಲ್ಲಿ ಮೂರನೆಯದು. ಕೊನೆಯ ಪುರುಷಾರ್ಥವು ಮೋಕ್ಷ, ಅದು ಕೊನೆಯ ಲಕ್ಷ್ಯ. ಧರ್ಮಕ್ಕೆ ಧರ್ಮಶಾಸ್ತ್ರ, ಅರ್ಥಕ್ಕೆ ಅರ್ಥಶಾಸ್ತ್ರ, ಮೋಕ್ಷಕ್ಕೆ ಮೋಕ್ಷ ಗ್ರಂಥಗಳ ಅಧ್ಯಯನವು ಅವಶ್ಯಕವೋ ಹಾಗೆಯೇ ಯಥಾಯೋಗ್ಯ ವಿವೇಕಜನ್ಯ ಪ್ರಯೋಗಕ್ಕಾಗಿ ಅಸಲೀ ಕಾಮಶಾಸ್ತ್ರದ ಸರಿಯಾದ ಅಧ್ಯಯನ ಅವಶ್ಯಕ. ಅದರಲ್ಲಿ ಕಾಮಕ್ರೀಡೆ ಒಂದು ಭಾಗ ಮಾತ್ರ ಎಂದು ಮೊದಲು ಅರ್ಥ ಮಾಡಿಕೊಳ್ಳಿ. ಅವರವರ ವಯೋಮಾನಕ್ಕೆ ಬೇಕಾದ್ದನ್ನು ಪ್ರಾಚೀನ ಪದ್ಧತಿಯಲ್ಲಿ ಕಲಿಸಲಾಗುತ್ತಿತ್ತು. ಅದನ್ನು ಬ್ರಿಟೀಷರ ಮೆಕಾಲೆ ಶಿಕ್ಷಣ ಪದ್ಧತಿಯು ಭಾರತದಲ್ಲಿ ಒತ್ತಿಕ್ಕಿ ತಮ್ಮಲ್ಲಿ ಮಾತ್ರ ಪ್ರಚಾರ ಮಾಡಿಕೊಂಡಿದೆ; ಅದೂ ಕೂಡ ಕಾಮಕ್ರೀಡಾ ಭಾಗ ಪ್ರಧಾನವಾಗಿಯೇ ಹೊರತು ಕಾಮವೆಂಬ ಪುರುಷಾರ್ಥ ಪ್ರಧಾನವಾಗಿಯಲ್ಲ.
"ಕಮ್ - ಕಾನ್ತೌ" ಧಾತುವಿನಿಂದ ಸಂಸ್ಕೃತದಲ್ಲಿ ಕಾಮ ಪದವು ಬಳೆದು ಬಂದಿದೆ. ಕಾಮ = ಇಚ್ಛೆ => ಆಕರ್ಷಣೆ -> ಪ್ರಪಂಚದ ಅಸ್ತಿತ್ವದ ಮೂಲ. ಪ್ರತಿಯೊಂದು ಪದಾರ್ಥವೂ ಮತ್ತೊಂದನ್ನು ಆಕರ್ಷಿಸುತ್ತದೆ. ಆಕರ್ಷಣೆಯ ಮೂಲದಲ್ಲಿ ಕಾಮವು ಪ್ರತಿಯೊಂದು ಪದಾಥದಲ್ಲಿರುತ್ತದೆ. ಅಮರಕೋಶದಲ್ಲಿ ಕಾಮವನ್ನು ’ಮಾನಸಿಕ ಭಾವ’ದ ಶ್ರೇಣಿಯಲ್ಲಿರಿಸಲಾಗಿದೆ. ಋಗ್ವೇದದಲ್ಲಿ ಕಾಮವನ್ನು ಮನದ ರೇತಸ್ ಎಂದು ಮಾನಸಿಕ ಭಾವವನ್ನೇ ಪ್ರತಿಪಾದಿಸಲಾಗಿದೆ.
ವಾತ್ಸ್ಯಾಯನ ಪ್ರಣೀತ ಕಾಮಸೂತ್ರದಂತೆ ಜ್ಞಾನೇಂದ್ರಿಯಗಳು (ಕಿವಿ, ತ್ವಚೆ, ಕಣ್ಣು, ನಾಲಿಗೆ, ಮೂಗು) ತಮ್ಮಯ ವಿಷಯದಲ್ಲಿ (ಶಬ್ದ, ಸ್ಪರ್ಶ, ರೂಪ, ರಸ, ಗಂಧ) ಅನುಕೂಲಕರವಾಗಿ ಪ್ರವೃತ್ತರಾಗುವುದೇ "ಕಾಮ"! ಅದು ಕಾಮವನ್ನು ಕೇವಲ ಶಾರೀರಿಕ ಸುಖ ಅಥವಾ ವಾಸನಾ ಎಂದಿಲ್ಲ. ಕಾಮವು ಲೌಕಿಕ ಅಲೌಕಿಕ. ಲೌಕಿಕ ಕಾಮದಲ್ಲಿ ಶಾರೀರಿಕ ಸುಖವು ಮುಖ್ಯವಾಗಿ ಇತರೆ ಇಚ್ಛೆಗಳು ಗೌಣವಾಗಿ ಅವಿತಿರುತ್ತವೆ. ಅಲೌಕಿಕ ಕಾಮದಲ್ಲಿ ದಿವ್ಯಕರ್ಮದ ಇಚ್ಛೆ ಹಾಗೂ ಕೆಲವೊಮ್ಮೆ ದೇವೇಚ್ಛೆಯನ್ನು ಕಾಣಲಾಗುತ್ತದೆ.
ಋಗ್ವೇದದಲ್ಲಿ ಪೃಥ್ವಿಯ ಉತ್ಪತ್ತಿಯ ಕಾರಣವು ಕಾಮವೆಂದೇ ನಂಬಲಾಗಿದೆ ಹಾಗೂ ಅದನ್ನು ಪರಬ್ರಹ್ಮದ ಹೃದಯದಿಂದ ಹುಟ್ಟಿದ್ದೆಂದಿದೆ. ಕಾಮೋತ್ಪತ್ತಿಯು ಅಲೌಕಿಕವೇ ಹೊರತು ಲೌಕಿಕವಲ್ಲ. ಲೌಕಿಕ ಕರ್ಮಗಳ ಸಿದ್ಧಿಗಾಗಿಯೇ ಕಾಮದಿಂದ ಪ್ರಜೋತ್ಪತ್ತಿ. ಉಪನಿಷತ್ತಿನಲ್ಲೂ ಇದರ ಪ್ರತಿಪಾದನೆ ಇದೆ -
ಸೋಽಕಾಮಯತ ಬಹುಸ್ಯಾಂ ಪ್ರಜಾಯೇತ |
ಕಾಮಮಯ ಏವಾಯಂ ಪುರುಷಃ || ತೈ.ಉ.
ಭಗವದ್ಗೀತೆಯಲ್ಲಿಯೂ ಕೃಷ್ಣನು "ಸಮಸ್ತ ಜೀವಜಗತ್ತಿನಲ್ಲಿ ಧರ್ಮದ ಅನುರೂಪೀ ಯಾವ ಕಾಮವಿದೆಯೋ ಅದು ನಾನೇ ಆಗಿದ್ದೇನೆ" ಎಂದಿದ್ದಾನೆ. "ಅಹಂ ಸರ್ವಸ್ಯ ಪ್ರಭವಃ" ಎಂದು ಕೃಷ್ಣನು ತನ್ನನ್ನು ಜಗತ್ತಿನ ಉತ್ಪತ್ತಿಯ ಮೂಲ ಕಾರಣವೆನ್ನುತ್ತಾ ಕಾಮರೂಪೀ ಬೀಜವೇ ತಾನೆಂದಿದ್ದಾನೆ.
ಪೌರಾಣಿಕ ಸಾಹಿತ್ಯ (ಪುರಾಣಾದಿ) ಮತ್ತು ಲೌಕಿಕ ಸಾಹಿತ್ಯದಲ್ಲಿ (ಕಾಳಿದಾಸ, ಮಾಘಾದಿಗಳ ಸಾಹಿತ್ಯ) ಕಾಮಕ್ಕೆ ದೇವತೆಗಳ ಉಪಾಧಿ ಪ್ರಾಪ್ತವಾಗಿದೆ. ಅದಕ್ಕೆ ನಾಟ್ಯಶಾಸ್ತ್ರದಲ್ಲಿಯೂ ಸ್ಥಾನ ದೊರಕಿದೆ. ಕಾಮಕ್ಕೆ ಶಿಲ್ಪ-ಸ್ಥಾಪತ್ಯಗಳಲ್ಲಿಯೂ ಸ್ಥಾನ ಸಿಕ್ಕಿದೆ; ಶಾಸ್ತ್ರಪರಂಪರೆಯಲ್ಲಿಯೂ ಕೂಡ. ಪುರುಷಾರ್ಥ ಚತುಷ್ಟಯಗಳಲ್ಲಿ, ಧರ್ಮ ಹಾಗೂ ಅರ್ಥದ ನಂತರ ಕಾಮಕ್ಕೆ ಸ್ಥಾನ ಸಿಕ್ಕಿದೆ; ತದನಂತರ ಮೋಕ್ಷಕ್ಕೆ. ವ್ಯಾಕರಣದಂತೆ ಮೊತ್ತಮೊದಲು ಧರ್ಮ, ನಂತರ ಅರ್ಥ, ಕಾಮ ಮತ್ತು ಮೋಕ್ಷ ಶಬ್ದಗಳು ನಂತರ ಬರಬೇಕು ಎಂಬ ನಿಯಮವೇನಿಲ್ಲ. ಆದರೆ ಮೊತ್ತಮೊದಲು ಅರ್ಥ ಶಬ್ದವಿರಬೇಕು, ಈ ಕ್ರಮ ನಿಶ್ಚಿತವಾಗಿದ್ದು ಮುಕ್ತಿ (ಮೋಕ್ಷ) ಪೂರ್ವದಲ್ಲಿ ಕಾಮದ ಉಪಯೋಗ ದರ್ಶಿಸುತ್ತದೆ. ಮುಕ್ತಿ ಮಾನವಜೀವನದ ಸರ್ವೋಚ್ಚ ಧ್ಯೇಯ, ಆದರೆ ಕಾಮವನ್ನು ಉಪೇಕ್ಷಿಸಿಯಲ್ಲ ಏಕೆಂದರೆ ಕಾಮ (ಧರ್ಮಾನುರೂಪ) ಮಾನವರಿಗೆ ಮೋಕ್ಷದ ಬಾಧಕವಲ್ಲ ಆದರೆ ಸಹಾಯಕ.
ಶಾಸ್ತ್ರೋಕ್ತ ಹಾಗೂ ಇಂದು ರೂಢಿಗತವಾಗಿರುವ ಷೋಡಶ ಸಂಸ್ಕಾರಗಳಲ್ಲಿ ವರ್ಣಿತ ಗರ್ಭಾಧಾನ, ಪುಂಸವನ ಹಾಗೂ ವಿವಾಹದಂತಹಾ ಸಂಸ್ಕಾರಗಳಿಂದ ಕಾಮದ ಮಹತ್ವ ಕಾಣಲು ಸಿಗುತ್ತದೆ.
Comments