top of page

⚕️ನಾಗಾರಾಧನೆ ಎಂಬ 🤯ಮನೋವಿಜ್ಞಾನ + 🤰ಸಂತಾನಶಾಸ್ತ್ರ

ನಾಗಾರಾಧನೆ ಎಂಬ ಪ್ರಾಚೀನ ಮನೋವಿಜ್ಞಾನ ಮತ್ತು ಪ್ರಸೂತಿಕಾ ವಿಜ್ಞಾನವನ್ನು ಪ್ರಸ್ತುತಪಡಿಸುವ ಬದಲು ಬ್ರಿಟಿಷರು ಭಾರತವನ್ನು "ಹಾವಾಡಿಗರ ಮೋಡಿಯಾಟದ ದೇಶ" ಎಂದು ಪ್ರಸ್ತುತಪಡಿಸಿದ್ದಾರೆಯೇ???ಲಗತ್ತಿಸಿರುವ ಫಲೀಕರಣದ ಚಿತ್ರಗಳು ತಮಿಳುನಾಡಿನ ಅರಿಯತುರೈನಲ್ಲಿರುವ ವರಮೂರ್ತೀಶ್ವರರ್ ದೇವಾಲಯದಿಂದ ಬಂದವು. ಕೆಲವು ಪೌರಾಣಿಕ ಅಂಶಗಳ ಆಧಾರದ ಮೇಲೆ ದೇವಾಲಯವು 6000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ (ರೋಮರ್ ಮತ್ತು ಮುಕುಂತನ್ ಎಂಬ ಋಷಿಗಳ ಐತಿಹಾಸಿಕ ಸಂಪರ್ಕವನ್ನು ಪರಿಗಣಿಸಿ). ಆದರೆ ಸಮಂಜಸವಾದ ಅಂದಾಜು ಸುಮಾರು 1000 ವರ್ಷಗಳು ಎಂದು ಹೇಳಲಾಗುತ್ತದೆ. ರಾಜ ಕುಂಜರ ಚೋಳನ್ ದೇವಾಲಯಕ್ಕೆ ಕೆಲ ಸೇರ್ಪಡೆಗಳನ್ನು ಮಾಡಿದ್ದಾನೆ. ಈ ದೇವಾಲಯವು ಖಂಡಿತವಾಗಿಯೂ ಚೋಳರ ಕಾಲದಲ್ಲಿ ಅಸ್ತಿತ್ವದಲ್ಲಿತ್ತು (ಸುಮಾರು 1000 ವರ್ಷಗಳಷ್ಟು ಹಳೆಯದು). ಆದ್ದರಿಂದ, ಆಧುನಿಕ ಸೂಕ್ಷ್ಮದರ್ಶಕದ ಆವಿಷ್ಕಾರಕ್ಕೂ ಮುಂಚೆಯೇ ನಾಗ ಸ್ವರೂಪದಲ್ಲಿರುವ ವೀರ್ಯಾಣುವಿನ ಮುಖೇನ ನಡೆಯುವ ಫಲೀಕರಣದ ಮಾದರಿಯನ್ನು ಕೆತ್ತಲಾಗಿದೆ.


ಭಾರತೀಯ ಸೂಕ್ಷ್ಮದರ್ಶಕ, ದೂರದರ್ಶಕ, ಗಣಕಯಂತ್ರ, ವಿಮಾನ, ಇತ್ಯಾದಿ ಹಲವಾರು ಪ್ರಾಚೀನ ಉಪಕರಣಗಳು ಹಾಗೂ ಅವುಗಳಲ್ಲಿರುವ ಗಾಜಿನ ತಂತ್ರಜ್ಞಾನವೂ ಪ್ರಾಚೀನ ಭಾರತದ ವೈಧಿಕ ಭೌತಶಾಸ್ತ್ರ ಮತ್ತು ತಂತ್ರಶಾಸ್ತ್ರದ ಮೂಲದ್ದು. ಅದನ್ನು ಅಧ್ಯಯನ ಮಾಡುವ ಶ್ರದ್ಧೆ ತೋರುವವರು ಬೆರಳೆಣಿಕೆಯಷ್ಟು ಮಂದಿಯಾದರೆ, ಅಂತಹಾ ವಿಚಾರಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಮನಸ್ಥಿತಿಯ ಜನರು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನಮ್ಮ ನಿಮ್ಮ ನಡುವೆಯೇ ಇದ್ದಾರೆ.


ಇನ್ನು ಅಣು, ವೀರ್ಯಾಣು ಬಗ್ಗೆ ಪೂರ್ವೀಕರಿಗೆ ಗೊತ್ತೇ ಇರಲಿಲ್ಲ ಎಂಬ ಮೂರ್ಖ ಮಂಡನೆಯನ್ನು ಮಾಡುವವರು ಬ್ರಿಟಿಷರ ಏಜೆಂಟುಗಳು. ವೈಧಿಕ ಭೌತಶಾಸ್ತ್ರದ ಮೊದಲ ಪಾಠದಲ್ಲಿಯೇ ಅಣು, ಧಾತುಗಳ ಸೂತ್ರ ಮತ್ತು ವಿವರಣೆ ಬರುತ್ತದೆ. ಅದು ಋಷಿಗಳ ಗುರುಕುಲ ಪಠ್ಯಕ್ರಮದಲ್ಲಿ ಸುರಕ್ಷಿತವಾಗಿ ಇದೆ. ವಿಚಾರವಾದಿಗಳು ಮತ್ತು ಬುದ್ಧಿಜೀವಿಗಳ ಕೈಗಿನ್ನೂ ಸಿಕ್ಕಿಲ್ಲ. ಅವರು ಇಂತಹಾ ವಿಚಾರಗಳನ್ನು ನೋಡಿಯೂ ನೋಡದಂತೆ ಹೋಗುತ್ತಾರೆ. ತಮಗೆ ಲಾಭ, ಹೆಸರು ಸಿಗುವುದಾದರೆ ಸೈದ್ಧಾಂತಿಕ ಬದ್ಧತೆ ಗಿದ್ಧತೆ ಎಲ್ಲ ಬಿಟ್ಟು ಏನಕ್ಕೇನೂ ಬರೆದು ಪ್ರಚಾರ ಗಿಟ್ಟಿಸಿಕೊಳ್ಳಬಲ್ಲರು. ಆಗದಿದ್ದರೆ ಅದನ್ನು ಮುಚ್ಚಿ ಹಾಕುವ ಶತಾಯಗತಾಯ ಪ್ರಯತ್ನ ಮಾಡುತ್ತಾರೆ.


ವೀರ್ಯ ಎಂಬ ದ್ರವ ಮಾತ್ರ ಅಲ್ಲ, ವೀರ್ಯ ಎಂಬ ಕಣದ ಬಗ್ಗೆ ಭಾಗವತದಲ್ಲಿ (೩.೩೧.೧) ಅಣುವಿಧ್ಯೆಯ ಪ್ರವರ್ತಕರಾದ ಕಪಿಲರು ನೀಡಿರುವ ಒಂದು ಝಲಕ್ ನೋಡಿಕೊಳ್ಳಿ -


ಶ್ರೀ ಭಗವಾನುವಾಚ -

ಕರ್ಮಣಾ ದೈವ ನೇತ್ರೇಣ ಜಂತುರ್ದೇವೋಪಪತ್ತಯೇ

ಸ್ತ್ರಿಯಾ ಪ್ರವಿಷ್ಟ ಉದರಂ ಪುಂಸೋ ರೇತಃ-#ಕಣಾಶ್ರಯಃ


ಪರಮಾತ್ಮನ ವಾಣಿ -

"ಕರ್ಮದ ಪರಿಣಾಮದಂತೆ, ಪರಮೇಶ್ವರನ ಮೇಲ್ವಿಚಾರಣೆಯಡಿ, ಜೀವಾತ್ಮನು ಒಂದು ವಿಶೇಷ ದೇಹವನ್ನು ಪಡೆಯುವುದಕ್ಕಾಗಿ ಮಹಿಳೆಯ ಗರ್ಭದಲ್ಲಿ ಪುರುಷನ ವೀರ್ಯದ #ಕಣದ ಮೂಲಕ ಪ್ರವೇಶಿಸುತ್ತದೆ."


- ಹೇಮಂತ್ ಕುಮಾರ್ ಜಿ

112 views1 comment

1 Comment

Rated 0 out of 5 stars.
No ratings yet

Add a rating
Unknown member
Jun 15, 2023

Thanks 🙏 sir you publish Indian ancient vadic scince, continue pls sir

Like
bottom of page