ಪಂಜುರ್ಲಿ ಯತಿವರೇಣ್ಯ ಅಣ್ಣಪ್ಪಯ್ಯನವರು
- Oct 14, 2022
- 2 min read
🙏🔥 ಪಂಜುರ್ಲಿ 🔥🙏
🕉️ ಯತಿವರೇಣ್ಯ ಅಣ್ಣಪ್ಪಯ್ಯನವರು 🕉️
✡️ ಸಿರಿಭೂವಲಯ ✡️
ಅಂದೊಮ್ಮೆ ನಡೆಯಿತು ಸೌತ್ರಾಮಣಿ ಗವಾಮಯನ ಯಾಗ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಯ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ..
ಪ್ರಕಟವಾಯಿತು ಹಲವು ಸಾಧಕರ ಜೀವನ ಚರಿತೆ ನಮ್ಮ ಗುರುವರ್ಯ ಯಾಗ ನಿರ್ದೇಶಕ ಬ್ರಹ್ಮ ಋಷಿ ಪಟ್ಟ ಹೊತ್ತ ವೇದ ಕೃಷಿಕ ಕೆ.ಎಸ್. ನಿತ್ಯಾನಂದರಿಗೆ ಅಗ್ನಿಮುಖದಲಿ..
ದೇವ, ಋಷಿ, ಅಗ್ನಿಗಳೊಟ್ಟಿಗೆ ಸಂವಹನ ನಡೆಸುವ ವಿಧ್ಯೆ, ಪ್ರತ್ಯಕ್ಷ ದೃಶ್ಯ ಕಾಣುವ ವಿಧ್ಯೆ ಬಳಸುವನಾತ ನಾಥ ಸಂಪ್ರದಾಯದ ೬ ವರುಷದ ವಟುವೆನ್ನುವ ೩೬೦ ಸಂವತ್ಸರಗಳ ದಾಟಿ ಬಂದಿಹ ೬೦ಕ್ಕೊಂದು ವರುಷ ಎನ್ನುವ ಬಾಲಬಪ್ಪನಿಗೆ ದರುಶನವಿತ್ತರು ಬ್ರಹ್ಮ ಋಷಿ ವಸಿಷ್ಠರ ಅಂಶದಲಿ ಎರಡೂವರೆ ಸಾವಿರ ವರುಷಗಳ ಹಿಂದೆ ಜನಿಸಿ ವೇದಧರ್ಮವ ಉಳಿಸಿ ಬೆಳೆಸಿದ ಯತಿವರೇಣ್ಯ ಅಣ್ಣಪ್ಪಯ್ಯರು. ಪ್ರತ್ಯಕ್ಷ ಕಂಡರೂ ಪರಾಮರ್ಶಿಸಿ ನೋಡೆಂಬ ಮೀಮಾಂಸೆಯ ಬದ್ಧತೆಗಾಗಿ ಖೇಚರೀ ವಿಧ್ಯೆ ಅಂದರೆ ಆ ಕಾಲಕ್ಕೆ ಪಯಣಿಸಿ ಅಣ್ಣಪ್ಪಯ್ಯನವರ ಚರಿತೆಯನ್ನು ಪ್ರಮಾಣೀಕರಿಸಿ ದಾಖಲಿಸುತ್ತಾರೆ. ಅದಕ್ಕೂ ಪ್ರಮಾಣದ ರೂಪದಲ್ಲಿ ಪ್ರಾಚೀನ ಜಾನಪದೀಯ ಮತ್ತು ಸಾಹಿತ್ಯಕ ದಾಖಲೆಗಳನ್ನೂ ಸಂಗ್ರಹಿಸುತ್ತಾರೆ.
