ಉಪನಯನವಾಗಿರುವವರು ಸಂಧ್ಯಾವಂದನೆಯಲ್ಲಿ ಸೂರ್ಯಾರ್ಘ್ಯದ ನಂತರ ತರ್ಪಣ ಕೊಡಬಹುದು.
ದೇವ/ವೇದ/ಋಷಿ ತರ್ಪಣ:-
(ಉಪನಯನವಾದವರು ಎಲ್ಲರೂ ನೀರಿನಿಂದ ಮಾತ್ರ ಕೊಡಲೇಬೇಕಾದ್ದು)

1. ಸವಿತಾರಂ ತರ್ಪಯಾಮಿ
2. ಪ್ರಜಾಪತಿಂ ತರ್ಪಯಾಮಿ
3. ಬ್ರಹ್ಮಾಣಂ ತರ್ಪಯಾಮಿ
4. ವೇದಾನ್ ತರ್ಪಯಾಮಿ
5. ಛಂದರ್ಷೀನ್ ತರ್ಪಯಾಮಿ
ಪಿತೃ ತರ್ಪಣದ ಸೂಚನೆಗಳು:-
* ತಿಲ ತರ್ಪಣ ( ಎಳ್ಳು - ನೀರು ಸಮೇತ ) ಕೊಡಲು ಆಗದಿದ್ದರೆ ಜಲ ತರ್ಪಣವನ್ನಾದರೂ ( ಬರೀ ನೀರಿನಿಂದ ) ಕೊಡಲೇಬೇಕು.
* ತರ್ಪಣ ಕೊಡುವಾಗ ಋಗ್ವೇದಿಗಳು ಮೊದಲು ಹೆಸರು ಹೇಳಿ ನಂತರ ಗೋತ್ರವನ್ನು ಹೇಳಬಹುದು.
* ಯಜುರ್ವೇದಿಗಳು ಮೊದಲು ಗೋತ್ರವನ್ನೂ ನಂತರ ಹೆಸರನ್ನೂ ಹೇಳಬಹುದು.
* ಹೆಸರು ಹೇಳಿದ ನಂತರ ಬ್ರಾಹ್ಮಣರು - ಶರ್ಮಾಣಂ, ಕ್ಷತ್ರಿಯರು - ವರ್ಮಾಣಂ, ವೈಶ್ಯರು - ಗುಪ್ತಂ, ಇತರ - ದಾಸಂ ಎಂದು ಹೇಳಿಕೊಳ್ಳಬಹುದು.
* ಗೋತ್ರ ಮತ್ತು ಹೆಸರು ಗೊತ್ತಿದ್ದರೆ ಹೇಳಬಹುದು. ಗೋತ್ರ ಮತ್ತು ಹೆಸರು ಹೇಳಿದರೂ, ಹೇಳದಿದ್ದರೂ ಯಾವುದೇ ತೊಡಕಿಲ್ಲ. ಸ್ಥಾನ ನಾಮ ಪ್ರಧಾನ.
* ಪುಣ್ಯಕ್ಷೇತ್ರ, ಪುಣ್ಯನದಿ, ಸಮುದ್ರ ಅಥವಾ ತೀರ್ಥಗಳಲ್ಲಿ ಸ್ನಾನ ಮಾಡಿದ ನಂತರ ತರ್ಪಣವನ್ನು ಕೊಡಬೇಕು.
* ಪಿತೃ ತರ್ಪಣಕ್ಕೆ ಆಗ್ನೇಯ ದಿಕ್ಕು ನಿಷಿದ್ಧ.
* ಬದುಕಿರುವವರಿಗೆ ತರ್ಪಣ ಕೊಡುವಹಾಗಿಲ್ಲ.
* ಕೇಳಕಂಡ 4 ವರ್ಗಗಳಲ್ಲಿ ಮೃತರಾಗುವ ತನಕ ಮಿಕ್ಕವರಿಗೆ ತರ್ಪಣ ಹುಟ್ಟುವುದಿಲ್ಲ. ಉದಾಹರಣೆಗೆ...
೧. ತಂದೆ ಜೀವಂತವಾಗಿರುವ ತನಕ ತರ್ಪಣದ ಅಧಿಕಾರ ಬರುವುದಿಲ್ಲ.
೨. ತಾಯಿ ಜೀವಂತವಾಗಿರುವ ತನಕ ಮಾತೃ ವರ್ಗ ತರ್ಪಣಕ್ಕೆ ಬರುವುದಿಲ್ಲ.
೩. ಹಾಗೆಯೇ ಮಾತಾಮಹ ವರ್ಗ ಅಂದರೆ ತಾಯಿಯ ತಂದೆ ಮತ್ತು ತಾಯಿಯ ತಾಯಿ ಜೀವಂತವಿರುವ ತನಕ ಆಯಾ ವರ್ಗದವರಿಗೆ ತರ್ಪಣ ಹುಟ್ಟುವುದಿಲ್ಲ.
೪. ಇನ್ನು ಪ್ರತಿಯೊಂದು ವರ್ಗದಲ್ಲಿಯೂ ಮೊದಲಿನವರು ಮೃತರಾಗಿ ಎರಡನೇಯವರಾಗಲೀ ಅಥವಾ ಮೂರನೇಯವರಾಗಲೀ ಜೀವಂತರಾಗಿದ್ದರೆ ಅವರ ಮುಂದಿನವರಿಗೆ ತರ್ಪಣ ಕೊಡಬೇಕಾದ ವಿಚಾರವನ್ನು ದೈವಜ್ಞರಲ್ಲಿ ವಿಚಾರಿಸಿ ತಿಳಿದುಕೊಳ್ಳಬೇಕು!!

ದ್ವಾದಶ ಪಿತೃ ತರ್ಪಣ ವಿಧಿ
ದಕ್ಷಿಣಾಭಿಮುಖವಾಗಿ ತಿರುಗಿಕೊಂಡು ಬಲ ಮೊಣಕಾಲನ್ನು ನೆಲಕ್ಕೆ ಊರಿ ಬಲಗೈಯಲ್ಲಿ ತಿಲವನ್ನು ಹಾಕಿಕೊಂಡು ಉದ್ಧರಣೆಯಿಂದ ಕಲಶೋದಕವನ್ನು ಬಲಗೈಗೆ ಹಾಕಿಕೊಂಡು ಹೆಬ್ಬರಳು ಮತ್ತು ತೋರು ಬೆರಳುಗಳ ಬುಡದ ಮಧ್ಯದಿಂದ ಕೆಳಕಂಡ 12 ಪಿತೃಗಳಿಗೆ ಕೆಳಕಂಡ ವಿಧಿಯಂತೆ ಒಂದೊಂದಾಗಿ ತರ್ಪಣವನ್ನು ಮೂರುಸಲ ತರ್ಪಯಾಮಿ - ತರ್ಪಯಾಮಿ - ತರ್ಪಯಾಮಿ ಎಂದು ಕೊಡಬೇಕು.
ಪಿತೃ ವರ್ಗ ತರ್ಪಣ:-
1. ಅಸ್ಮತ್ ಪಿತರಂ (____ ಗೋತ್ರಂ, ____ ಶರ್ಮಾಣಂ) ವಸುರೂಪಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ತಂದೆ)
2. ಅಸ್ಮತ್ ಪಿತಾಮಹಂ (____ ಗೋತ್ರಂ, ____ ಶರ್ಮಾಣಂ) ರುದ್ರರೂಪಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ಅಜ್ಜ=ತಂದೆಯ ತಂದೆ)
3. ಅಸ್ಮತ್ ಪ್ರಪಿತಾಮಹಂ (____ ಗೋತ್ರಂ, ____ ಶರ್ಮಾಣಂ) ಆದಿತ್ಯರೂಪಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ಮುತ್ತಜ್ಜ=ತಂದೆಯ ತಂದೆಯ ತಂದೆ ಇಲ್ಲದವರು ಮಾತ್ರ ಮಾಡತಕ್ಕದ್ದು)
ಮಾತೃ ವರ್ಗ ತರ್ಪಣ:-
4. ಅಸ್ಮನ್ ಮಾತರಂ (____ ಗೋತ್ರಾಂ, ____ ದಾಂ) ವಸುರೂಪಾಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ತಾಯಿ)
5. ಅಸ್ಮತ್ ಪಿತಾಮಹೀಂ (____ ಗೋತ್ರಾಂ, ____ ದಾಂ) ರುದ್ರರೂಪಾಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ಅಜ್ಜಿ=ತಂದೆಯ ತಾಯಿ)
6. ಅಸ್ಮತ್ ಪ್ರಪಿತಾಮಹೀಂ (____ ಗೋತ್ರಾಂ, ____ ದಾಂ) ಆದಿತ್ಯರೂಪಾಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ಮುತ್ತಜ್ಜಿ=ತಂದೆಯ ತಂದೆಯ ತಾಯಿ)
ಮಾತಾಮಹ ವರ್ಗ ತರ್ಪಣ:-
7. ಅಸ್ಮನ್ ಮಾತಾಮಹಂ (____ ಗೋತ್ರಾಂ, ____ ಶರ್ಮಾಣಂ) ವಸುರೂಪಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ಅಜ್ಜ=ತಾಯಿಯ ತಂದೆ)
8. ಅಸ್ಮನ್ ಮಾತುಃ ಪಿತಾಮಹಂ (____ ಗೋತ್ರಾಂ, ____ ಶರ್ಮಾಣಂ) ರುದ್ರರೂಪಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ಮುತ್ತಜ್ಜ=ತಾಯಿಯ ತಂದೆಯ ತಂದೆ)
9. ಅಸ್ಮನ್ ಮಾತುಃ ಪ್ರಪಿತಾಮಹಂ (____ ಗೋತ್ರಾಂ, ____ ಶರ್ಮಾಣಂ) ಆದಿತ್ಯರೂಪಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ತಾಯಿಯ ಮುತ್ತಜ್ಜ = ತಾಯಿಯ ತಂದೆಯ ಅಜ್ಜ)
ಮಾತಾಮಹಿ ವರ್ಗ ತರ್ಪಣ:-
10. ಅಸ್ಮನ್ ಮಾತಾಮಹೀಂ (____ ಗೋತ್ರಾಂ, ____ ದಾಂ) ವಸುರೂಪಾಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ಅಜ್ಜಿ=ತಾಯಿಯ ತಾಯಿ)
11. ಅಸ್ಮನ್ ಮಾತುಃ ಪಿತಾಮಹೀಂ (____ ಗೋತ್ರಾಂ, ____ ದಾಂ) ರುದ್ರರೂಪಾಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ಮುತ್ತಜ್ಜಿ=ತಾಯಿಯ ತಂದೆಯ ತಾಯಿ)
12. ಅಸ್ಮನ್ ಮಾತುಃ ಪ್ರಪಿತಾಮಹೀಂ (____ ಗೋತ್ರಾಂ, ____ ದಾಂ) ಆದಿತ್ಯರೂಪಾಂ ಸ್ವಧಾ ನಮಸ್ತರ್ಪಯಾಮಿ ತರ್ಪಯಾಮಿ ತರ್ಪಯಾಮಿ (ತಾಯಿಯ ಮುತ್ತಜ್ಜಿ=ತಾಯಿಯ ತಂದೆಯ ಅಜ್ಜಿ)
ಸೂಚನೆ - ಪಿತೃವಿಜ್ಞಾನದ ಸಿದ್ಧಾಂತಗಳ ಬಗೆಗಿನ ಪ್ರಾಥಮಿಕ ಪಾಠದ ವೀಡಿಯೋ ರೆಕಾರ್ಡಿಂಗನ್ನು ನೋಡಿ ಕಲಿಯುವುದಕ್ಕೆ ಇಚ್ಛಿಸುವವರು ಮುಂದಿನ ಲಿಂಕನ್ನು ಬಳಸಿ ನೊಂದಣಿ ಮಾಡಿಕೊಳ್ಳಬಹುದು - https://www.vedavidhya.com/challenge-page/pvp1
- ಹೇಮಂತ್ ಕುಮಾರ್ ಜಿ
Commentaires